ಅಳವಂಡಿ ಮೀಪದ ಕಾತರಕಿ ಗ್ರಾಮದಲ್ಲಿ ಮಹಿಳೆಯರ ಕುಂಭ ಮೋಳದೊಂದಿಗೆ ಶ್ರೀ ಕಾಳಿಕಾದೇವಿ ಭಾವಚಿತ್ರ ಮೆರವಣಿಗೆ ನಡೆಯಿತು. ಪ್ರಮುಖರಾದ ಯರಿಯಪ್ಪಗೌಡ ಹಿರೇಗೌಡ್ರ, ಮಂಜುನಾಥ, ಸಿದ್ದನಗೌಡ ಹಿರೇಗೌಡ್ರ, ಮದನಸಾಬ ಸಿದ್ನೆಕೊಪ್ಪ ಇತರರಿದ್ದರು.  
ಜಿಲ್ಲೆ

ಶ್ರೀ ಕಾಳಿಕಾದೇವಿ ಮೆರವಣಿಗೆ ಅದ್ದೂರಿ

ಅಳವಂಡಿ: ಸಮೀಪದ ಕಾತರಕಿ ಗ್ರಾಮದಲ್ಲಿ ಶ್ರೀ ಕಾಳಿಕಾದೇವಿ ಜಾತ್ರೆ ಅಂಗವಾಗಿ ಭಾವಚಿತ್ರ ಮೆರವಣಿಗೆ ಶನಿವಾರ ಅದ್ದೂರಿಯಾಗಿ ಜರುಗಿತು.

ದೇವಿಗೆ ವಿಶೇಷ ಪೂಜೆ ಪುನಸ್ಕಾರ ಸಲ್ಲಿಸಲಾಯಿತು. ಭಕ್ತರು ದೇವಿಗೆ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿದರು. ನಂತರ ಅಲಂಕೃತ ವಾಹನದಲ್ಲಿ ಕಾಳಿಕಾದೇವಿ ಭಾವಚಿತ್ರ ವಿರಿಸಿ ಮಹಿಳೆಯರ ಕಳಸ, ಕುಂಭ ಹಾಗೂ ಸಕಲ ವಾದ್ಯ ಮೇಳದೊಂದಿಗೆ ಗ್ರಾಮದ ಮುಖ್ಯ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ಮಾಡಲಾಯಿತು.

ನಂತರ ಅನ್ನ ಸಂತರ್ಪಣೆ ನಡೆಯಿತು. ಪ್ರಮುಖರಾದ ವೀರೇಶ ಕಲಿ, ಮಾರುತೆಪ್ಪ ತಳವಾರ, ಗೋವಿಂದಪ್ಪ ತಳವಾರ, ಸುರೇಶ ಆರ್ಯ, ಮಾಬುಸಾಬ ನದಾಫ್, ದೇವರಾಜ ಹೊಳೆಪ್ಪನವರ, ಶಂಕರಪ್ಪ ಹುರಕಡ್ಲಿ, ಗವಿಸಿದ್ದಪ್ಪ ಶೆಟ್ಟರ ಇತರರಿದ್ದರು.