ಅಳವಂಡಿ: ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಹಾಗೂ ಜೀವನ್ ಜ್ಯೋತಿ ಯೋಜನೆ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸಲಿದೆ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಬಿ. ವಿನಯಕುಮಾರ ಹೇಳಿದರು.
ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌ವತಿಯಿಂದ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಹಾಗೂ ಜೀವನ್ ಜ್ಯೋತಿ ಯೋಜನೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಒಂದು ಅಪಘಾತ ವಿಮಾ ಸ್ಕೀಂ ಆಗಿದೆ. ಇದು 18 ರಿಂದ 70 ವರ್ಷ ವಯಸ್ಸಿನ ಬ್ಯಾಂಕ್ ಖಾತೆದಾರರಿಗೆ ಲಭ್ಯವಿದೆ. ವಾರ್ಷಿಕ 20 ರೂ. ಪ್ರೀಮಿಯಂನಲ್ಲಿ ಅಪಘಾತದಿಂದ ಮರಣ ಅಥವಾ ಅಂಗವೈಕಲ್ಯಕ್ಕೆ 2 ಲಕ್ಷದವರೆಗೆ ರಕ್ಷಣೆ ನೀಡುತ್ತದೆ ಎಂದರು.
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಇದು ಯಾವುದೇ ಕಾರಣದಿಂದಾಗಿ ಮರಣ ಹೊಂದಿದ ಜೀವ ವಿಮಾ ರಕ್ಷಣೆ ನೀಡಲಿದೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ 50 ವಯಸ್ಸಿನವರೆಗೆ ಇರಲಿದೆ. ಅರ್ಜಿದಾರರು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು. ವಾರ್ಷಿಕ ಪ್ರೀಮಿಯಂ 436 ರೂ. ಪಾವತಿಸಬೇಕು. ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ, ಪಿಡಿಒ ಕೊಟ್ರಪ್ಪ ಅಂಗಡಿ, ಪ್ರಮುಖರಾದ ಗುರುಬಸವರಾಜ ಹಳ್ಳಿಕೇರಿ, ಶಿವಮೂರ್ತಿ, ದೇವೇಂದ್ರರೆಡ್ಡಿ, ಗೀತಾ, ಸುರೇಶ, ಮಾರುತಿ, ಕಾವೇರಿ, ಮಲ್ಲಮ್ಮ, ಪ್ರಕಾಶ, ಗುರುಶಾಂತಯ್ಯ ಇತರರಿದ್ದರು.