ಅಳವಂಡಿ ಸಮೀಪದ ಹಲವಾಲಿ ಗ್ರಾಮದಲ್ಲಿ ಗೃಹಲಕ್ಷ್ಮಿ ಹಣದಿಂದ ಫ್ರಿಜ್ ಖರೀದಿಸಿದ ಪಾರ್ವತಮ್ಮ ಮತ್ತು ಕುಟುಂಬ.  
ಜಿಲ್ಲೆ

ಗೃಹಲಕ್ಷ್ಮಿ ಹಣದಿಂದ ಫ್ರಿಜ್ ಖರೀದಿ

ಅಳವಂಡಿ: ಸಮೀಪದ ಹಲವಾಗಲಿ ಗ್ರಾಮದ ಪಾರ್ವತಮ್ಮ ಮೈಲಾರಪ್ಪ ಬಂಗಿ ಇವರು ರಾಜ್ಯ ಸರ್ಕಾರದ ಗೃಹಲಕ್ಷ್ಮಿಯೋಜನೆ ಹಣದಿಂದ ಫ್ರಿಜ್ ಖರೀದಿಸಿ ಪುತ್ರನ ವ್ಯಾಪಾರಕ್ಕೆ ನೆರವಾಗಿದ್ದಾರೆ.

ಪಾರ್ವತಮ್ಮ ಬ್ಯಾಂಕ್ ಖಾತೆಗೆ ಜಮೆಯಾದ ಹಣದಲ್ಲಿ 27 ಸಾವಿರ ರೂ. ಮೌಲ್ಯದ ಫ್ರಿಜ್ ಖರೀದಿಸಿ ಪುತ್ರ ನಾಗರಾಜನ ಚಹಾ ಅಂಗಡಿಗೆ ಅನುಕೂಲ ಮಾಡಿ ಕೊಟ್ಟಿದ್ದಾರೆ.

ಈ ಬಗ್ಗೆ ಪ್ರತಿಕ್ರಿಸಿದ ನಾಗರಾಜ ಬಂಗಿ, ಹಲವಾರು ವರ್ಷದಿಂದ ಹೋಟೆಲ್ ನಡೆಸುತ್ತಿದ್ದು, ಇದೀಗ ನನ್ನ ತಾಯಿ ಗೃಹಲಕ್ಷ್ಮಿ ಹಣದಿಂದ ಫ್ರಿಜ್ ಕೊಡಿಸಿದ್ದು, ವ್ಯಾಪಾರ ವೃದ್ಧಿಗೆ ಅನುಕೂಲವಾಗಲಿದೆ ಎಂದರು.