ಅಳವಂಡಿ; ಮಳೆಗಾಲದಲ್ಲಿ ಗ್ರಾಮದ ಪಕ್ಕದಲ್ಲಿರುವ ಹಿರೇಹಳ್ಳ ತುಂಬಿ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಸ್ವಚ್ಛಗೊಳಿಸಲು ನಿರ್ಧಾರಕ್ಕೆ ಇಲ್ಲಿನ ಗ್ರಾಪಂಯಲ್ಲಿ ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರು.
ಗ್ರಾಮದ ಪಶು ಆಸ್ಪತ್ರೆ ಜಾಗಕ್ಕೆ ಫಾರ್ಮ್ ನಂ-9, 11 ವಿತರಿಸಲು, ಗ್ರಾಮದ ಮೂರನೇ ಅಂಗನವಾಡಿ ಕೇಂದ್ರದ ಛಾವಣಿ ದುರಸ್ತಿಗೊಳಿಸಲು ಹಾಗೂ ಕುಡಿವ ನೀರಿನ ಅಭಾವವಾಗದಂತೆ ಕ್ರಮ ಕೈಕೊಳ್ಳಲು ತೀರ್ಮಾನಿಸಲಾಯಿತು.
ಗ್ರಾಪಂ ವ್ಯಾಪ್ತಿಯಲ್ಲಿ ಮಾಸಿಕ ಪ್ರಗತಿ, ಸ್ವಚ್ಛತೆ, ಬೀದಿದೀಪಗಳು ಹಾಗೂ ಇನ್ನಿತರ ಮೂಲಸೌಕರ್ಯಗಳನ್ನು ಮತ್ತು ವಿವಿಧ ವಿಷಯಗಳ ಬಗ್ಗೆ ಸಭೆಯ ಗೊತ್ತುವಳಿ ಓದಿ ದೃಢೀಕರಿಸಿ, ಅಧಿಕಾರಿಗಳಿಂದ ಹಾಗೂ ಸಾರ್ವಜನಿಕರ ಅರ್ಜಿಗಳನ್ನು ಪರಿಶೀಲಿಸಲಾಯಿತು.
ಅಧ್ಯಕ್ಷೆ ಶಂಕ್ರಮ್ಮ ಜೋಗಿನ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶಾರಮ್ಮ ಇಳಿಗೇರ, ಪಿಡಿಒ ಕೊಟ್ರಪ್ಪ ಅಂಗಡಿ, ಸದಸ್ಯರಾದ ಹನುಮಂತ ಮೂಲಿಮನಿ, ನಾಗರಾಜ ನವನಳ್ಳಿ, ಉಮೇಶಗೌಡ, ವಿಶ್ವನಾಥ ದೋತರಗಾವಿ, ಹನುಮಂತ ಮೋರನಾಳ, ಭಾರತಿ ಬೆಣಕಲ್, ಅನ್ವರ ಗಡಾದ, ಗೌಸಬೀ, ಸುವರ್ಣಾ ಅರಳೆಲೆಮಠ, ಹನುಮವ್ವ, ಕಾರ್ಯದರ್ಶಿ ಬಸವರಾಜ, ಸಿಬ್ಬಂದಿ ಶಿವಮೂರ್ತಿ, ದೇವೆಂದ್ರರಡ್ಡಿ ಇದ್ದರು.