ಅಳವಂಡಿ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಗ್ರಾಮದ ಎರಡು ಕೇಂದ್ರಗಳಾದ ಶ್ರೀ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ವಿದ್ಯಾಲಯ ಹಾಗೂ ಶ್ರೀ ಮುದಕನಗೌಡ ಗಾಳಿ ಬಾಲಕಿಯರ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದ್ದು ಒಟ್ಟು 433 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.
ಮೂಲಭೂತ ಸೌಕರ್ಯಗಳಾದ ಶುದ್ಧ ಕುಡಿವ ನೀರು, ವಿದ್ಯುತ್ ದೀಪ, ಶೌಚಗೃಹ, ಪರೀಕ್ಷೆ ಬರೆಯಲು ಡೆಸ್ಕ್ ಕಲ್ಪಿಸಲಾಗಿದ್ದು, ವಿದ್ಯಾರ್ಥಿಗಳ ರೋಲ್ ನಂಬರ್ ಹಾಕುವ ಪ್ರಕ್ರಿಯೆ ಪೂರ್ಣಗೊಂಡಿದೆ. ಎಸ್‌ಎಸ್ ಪಿಯು ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಬಾಲಕರು-79, ಬಾಲಕಿಯರು-159 ಒಟ್ಟು 238 ವಿದ್ಯಾರ್ಥಿಗಳು ಹಾಗೂ ಶ್ರೀ ಮುದಕನಗೌಡ ಗಾಳಿ ಬಾಲಕಿಯರ ಪ್ರೌಢಶಾಲೆಯಲ್ಲಿ ಬಾಲಕರು-74, ಬಾಲಕಿಯರು-121 ಒಟ್ಟು 195 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆಂದು ಮುಖ್ಯ ಅಧೀಕ್ಷಕರಾದ ಸುರೇಂದ್ರಗೌಡ, ವಿ.ಎಚ್.ಪುಲೇಶಿ ಮಾಹಿತಿ ನೀಡಿದರು.
ಮುಖ್ಯ ಅಧೀಕ್ಷಕರಾದ ಸುರೇಂದ್ರಗೌಡ, ವಿ.ಎಚ್.ಪುಲೇಶಿ, ಸಿಆರ್‌ಪಿ ವಿಜಯಕುಮಾರ ಟಿಕಾರೆ, ಶಿಕ್ಷಕರಾದ ವಿ.ಜಿ.ಹಿರೇಮಠ, ನೀಲಪ್ಪ, ಅಂಬರೀಶ, ಹನುಮಂತ, ಸಂಪಕ್ಕ, ವಾಸವಿ, ರೀಷಾ, ಜಿ.ಎಸ್.ಪಾಟೀಲ, ವೆಂಕರಡ್ಡಿ, ಸುರೇಶ, ಚನ್ನಮ್ಮ, ರವಿ, ಸುರೇಶ, ಮೋತೆಪ್ಪ, ಮಹೇಶ ಮಾಳೆಕೊಪ್ಪ, ಬಸವರಾಜ ಇತರರಿದ್ದರು.