ಬೆಟಗೇರಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ದಾಖಲಾತಿ ಮತ್ತು ಹಾಜರಾತಿ ಆಂದೋಲನದಲ್ಲಿ ನಾಯಕರ ವೇಷ ಭೂಷಣ ಧರಿಸಿ ಗಮನ ಸೆಳೆದರು. ಪ್ರಮುಖರಾದ ಬಸವರಾಜ, ಗಂಗಪ್ಪ, ಆಂಜನೇಯ, ಮೌನೇಶ, ಬಸವರಾಜ ಇತರರಿದ್ದರು.  
ಜಿಲ್ಲೆ

ಪ್ರತಿ ಮಗುವೂ ಶಿಕ್ಷಣ ಪಡೆಯಲಿ, ಕಲಿಕೆ ಟಾಟಾ ಟ್ರಸ್ಟ್ ಸಂಯೋಜಕ ಮೌನೇಶ ಹೇಳಿಕೆ

ಕುರುವತ್ತಿ ಶ್ರೀಕಾಂತಪ್ಪ

ಅಳವಂಡಿ: ಮಕ್ಕಳಿಗಾಗಿ ಆಸ್ತಿಯನ್ನು ಮಾಡಬೇಡಿ. ಮಕ್ಕಳನ್ನೇ ಆಸ್ತಿಯನ್ನಾಗಿ ರೂಪಿಸುವಂತ ಶಿಕ್ಷಣ ಕೊಡಿಸಿ ಎಂದು ಕಲಿಕೆ ಟಾಟಾ ಟ್ರಸ್ಟ್‌ನ ಸಂಯೋಜಕ ಮೌನೇಶ ತಿಳಿಸಿದರು.

ಸಮೀಪದ ಬೆಟಗೇರಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಕಲಿಕೆ ಟಾಟಾ ಟ್ರಸ್ಟ್ ಸಹಯೋಗದಲ್ಲಿ ದಾಖಲಾತಿ ಮತ್ತು ಹಾಜರಾತಿ ಆಂದೋಲನಕ್ಕೆ ಚಾಲನೆ ನೀಡಿ ಗುರುವಾರ ಮಾತನಾಡಿದರು.

ಮಕ್ಕಳು ಶಾಲೆಯಿಂದ ಹೊರಗುಳಿಯಬಾರದು. ಪ್ರತಿ ಮಗುವೂ ಶಿಕ್ಷಣ ಪಡೆಯಬೇಕು. ಶಿಕ್ಷಣ ಪಡೆಯುವುದು ಮಕ್ಕಳ ಹಕ್ಕು ಎಂದರು.

ಮುಖ್ಯ ಶಿಕ್ಷಕ ಗಂಗಪ್ಪ ಮಾತನಾಡಿ, ಕಲಿಕೆ ಟಾಟಾ ಸಂಸ್ಥೆ ಕೊಪ್ಪಳ ತಾಲೂಕಿನ 50 ಶಾಲೆಗಳಲ್ಲಿ ಗ್ರಂಥಾಲಯ ತೆರದು ಮಕ್ಕಳ ಬುದ್ಧಿಮಟ್ಟ ಹೆಚ್ಚಿಸುವ ಕಾರ್ಯ ಮಾಡುತ್ತಿದೆ ಎಂದರು. ಟ್ರಸ್ಟ್‌ನ ಸಂಯೋಜಕ ಆಂಜನೇಯ ಮರಿಗೌಡ್ರ ಮಾತನಾಡಿದರು.

ಆಂದೋಲನದಲ್ಲಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ಕುಂಭ ಹೊತ್ತು ಮತ್ತು ವಿದ್ಯಾರ್ಥಿಗಳು ವಿವಿಧ ನಾಯಕರ ಛದ್ಮವೇಶ ಧರಿಸಿ ಘೋಷಣೆ ಕೂಗಿ ಗ್ರಾಮದಲ್ಲಿ ಜಾಗೃತಿ ಮೂಡಿಸಿದರು. ಎಸ್ಡಿಎಂಸಿ ಅಧ್ಯಕ್ಷ ಬಸವರಾಜ ನಾಗರಡ್ಡಿ, ಮುಖ್ಯ ಶಿಕ್ಷಕ ಗಂಗಪ್ಪ, ಕಲಿಕೆ ಟಾಟಾ ಟ್ರಸ್ಟ್‌ನ ಮೌನೇಶ, ಸಿಆರ್‌ಪಿ ಬಸವರಾಜ ಇತರರಿದ್ದರು.