ಅಳವಂಡಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸಮೀಪದ ಬಿಸರಹಳ್ಳಿ ಗ್ರಾಮದಲ್ಲಿ ರಾಮಣ್ಣ ದ್ಯಾವಣ್ಣ ಅವರ ಮನೆ ಸಂಪೂರ್ಣ ಸುಟ್ಟಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ ದುರ್ಘಟನೆ ನಡೆದಿದೆ.
ಅಗ್ನಿ ಅವಘಡದಲ್ಲಿ ನಗದು, ದವಸ, ಧಾನ್ಯ, ಚಿನ್ನಾಭರಣ ಹಾಗೂ ಗೃಹಪಯೋಗಿ ವಸ್ತುಗಳು ಬೆಂಕಿಗಾಹುತಿಯಾಗಿವೆ. ಕೊಪ್ಪಳದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟಿತು.