ಅಳವಂಡಿ ಸಮೀಪದ ಹೈದರನಗರದಲ್ಲಿ ಶ್ರೀ ದುರ್ಗಾದೇವಿ ಹೊಳೆದಂಡೆ ಯಾತ್ರೆ ಹಾಗೂ ಗಂಗಾಪೂಜೆ ಕಾರ್ಯಕ್ರಮ ಮಂಗಳವಾರ ನಡೆಯಿತು. ಪ್ರಮುಖರಾದ ಕಾಳಪ್ಪ, ಶೇಖರಪ್ಪ, ಪರಮೇಶ, ರೇಖಪ್ಪ, ವಿರೂಪಾಕ್ಷಿ ಕೃಷ್ಣಪ್ಪ, ಚಂದ್ರಪ್ಪ, ಮಲ್ಲಿಕಾರ್ಜುನ ಇತರರಿದ್ದರು.  
ಜಿಲ್ಲೆ

ದುರ್ಗಾದೇವಿ ಹೊಳೆದಂಡೆ ಯಾತ್ರೆ ಅದ್ದೂರಿ

ಕುರುವತ್ತಿ ಶ್ರೀಕಾಂತಪ್ಪ

ಅಳವಂಡಿ: ಸಮೀಪದ ಹೈದರನಗರ ಗ್ರಾಮದ ಆರಾಧ್ಯ ದೇವತೆ ಶ್ರೀ ದುರ್ಗಾದೇವಿ ಹೊಳೆದಂಡೆ ಯಾತ್ರೆ ಹಾಗೂ ಗಂಗಾಪೂಜೆ ಕಾರ್ಯಕ್ರಮ ಮಂಗಳವಾರ ಅದ್ದೂರಿಯಾಗಿ ಜರುಗಿತು.

ಬೆಳಗ್ಗೆ ಶ್ರೀದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ತಳಿರು, ತೋರಣ, ಹೂಗಳಿಂದ ಅಲಂಕರಿಸಿದ್ದ ವಾಹನದಲ್ಲಿ ಶ್ರೀಮಾತೆಯ ಉತ್ಸವ ಮೂರ್ತಿ ಇರಿಸಿ ವಾದ್ಯಮೇಳ ಹಾಗೂ ಮಹಿಳೆಯರ ನೃತ್ಯ, ಹಾಡಿನೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತುಂಗಭದ್ರಾ ನದಿ ಪಾತ್ರಕ್ಕೆ ತೆರಳಿ ಗಂಗಾಪೂಜೆ ನೆರವೇರಿಸಲಾಯಿತು. ನಂತರ ಗ್ರಾಮಕ್ಕೆ ಮರಳಿತು.

ಪ್ರಮುಖರಾದ ಕಾಳಪ್ಪ ನಾಯಕ, ಶೇಖರಪ್ಪ ಪೂಜಾರ, ಪರಮೇಶ ನಾಯಕ, ರೇಖಪ್ಪ ನಾಯಕ, ಕೃಷ್ಣಪ್ಪ ಶ್ಯಾಸಿ, ರತ್ನಪ್ಪ ಡಾವು, ಹೂವಪ್ಪ ಕಾರ್ಬಾರಿ, ಚಂದ್ರಪ್ಪ ನಾಯಕ, ವಾಸಪ್ಪ ಬಡಿಗೇರ, ಚಂದಪ್ಪ ನಾಯಕ, ವಿರೂಪಾಕ್ಷಿ ಬಡಿಗೇರ ಇತರರಿದ್ದರು.