ಗಬ್ಬೂರಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಶೆಮುಕ್ತ ಭಾರತ ಅಭಿಯಾನದ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ವಿಆರ್‌ಡಬ್ಲುೃ ಸಿದ್ದಲಿಂಗಮ್ಮ ಹಾಲಗುಂದಿ, ಶಿಕ್ಷಕ ಶೇಖರ, ಆರ್‌ಸಿಡಿ ಟಾಸ್ಕಪೋರ್ಸನ ಪ್ರಧಾನ ಕಾರ್ಯದರ್ಶಿ ವೀರೇಶ ಹಾಲಗುಂದಿ ಇದ್ದರು. 
ಜಿಲ್ಲೆ

ಮಾನಸಿಕ ಕುಗ್ಗಿಸಲಿವೆ ದುಶ್ಚಟಗಳು

ಅಳವಂಡಿ: ಯುವಕರು, ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾಗದೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಸಿದ್ದಲಿಂಗಮ್ಮ ಹಾಲಗುಂದಿ ಹೇಳಿದರು.

ಸಮೀಪದ ಗಬ್ಬೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಶೆಮುಕ್ತ ಭಾರತ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಹಾಗೂ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.

ಓದುವ ವಯಸ್ಸಿನಲ್ಲಿ ಕೆಟ್ಟ ಚಟಗಳಿಗೆ ದಾಸರಾದರೆ ಭವಿಷ್ಯ ಕತ್ತಲಿನಿಂದ ಕೂಡಿರಲಿದೆ. ಅಲ್ಲದೆ ದುಶ್ಚಟಗಳು ಮಾನಸಿಕ ಕುಗ್ಗಿಸಲಿವೆ. ಇದರಿಂದ ಓದು ತಲೆಗೆ ಹತ್ತುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಶಿಕ್ಷಕ ಶೇಖರ, ಆರ್‌ಸಿಡಿ ಟಾಸ್ಕ್‌ಫೋರ್ಸ್‌ನ ಪ್ರಧಾನ ಕಾರ್ಯದರ್ಶಿ ವೀರೇಶ ಹಾಲಗುಂದಿ ಇತರರಿದ್ದರು.