ಅಳವಂಡಿ ಸಮೀಪದ ಗುಳದಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ನಶಾಮುಕ್ತ ಭಾರತ ಅಭಿಯಾನದ ನಿಮಿತ್ತ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಬಿತ್ತಿಪತ್ರ ಪ್ರದರ್ಶಿಸಲಾಯಿತು. ತಾಲೂಕು ವಿವಿಧೋದ್ದೇಶ ಕಾರ್ಯಕರ್ತೆ ಜಯಶ್ರೀ ವಣಗೇರಿ, ಗ್ರಾಪಂ ಉಪಾಧ್ಯಕ್ಷ ಯಮನೂರಪ್ಪ ಗೊರವರ, ಕಾಯಕಮಿತ್ರ ಅನ್ನಪೂರ್ಣ ಗೊಂದಿಹೊಸಳ್ಳಿ, ಗ್ರಂಥಪಾಲಕಿ ಅರುಣಾ ಗಬ್ಬೂರು ಇತರರಿದ್ದರು.  
ಜಿಲ್ಲೆ

ದುಶ್ಚಟದಿಂದ ದೂರವಿದ್ದು ಆರೋಗ್ಯವಾಗಿ ಜೀವಿಸಿ

ಕುರುವತ್ತಿ ಶ್ರೀಕಾಂತಪ್ಪ

ಅಳವಂಡಿ: ಮಧ್ಯಪಾನ ಆರೋಗ್ಯಕ್ಕೆ ಹಾನಿಕಾರವಾಗಿದ್ದು, ಸರಾಯಿ ಸೇವನೆಯಿಂದ ಹೆಂಡತಿ ಮಕ್ಕಳ ಉಪವಾಸ, ಚಟ ಕಲಿತವ ಬೇಗ ಚಟ್ಟ ಕಟ್ಟುತ್ತಾನೆ ಎಂದು ತಾಲೂಕು ವಿವಿಧೋದ್ದೇಶ ಕಾರ್ಯಕರ್ತೆ ಜಯಶ್ರೀ ವಣಗೇರಿ ಹೇಳಿದರು.

ಸಮೀಪದ ಗುಳದಳ್ಳಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕೊಪ್ಪಳ, ತಾಪಂ, ಗ್ರಾಪಂ ಸಹಯೋಗದಲ್ಲಿ ನಶೆಮುಕ್ತ ಭಾರತ ಅಭಿಯಾನದ ನಿಮಿತ್ತ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಗವಿಕಲ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಪ್ರತಿಯೊಂದು ಗ್ರಾಪಂ ಮಟ್ಟದಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಂದ ನಶಾಮುಕ್ತ ಭಾರತ ಅಭಿಯಾನದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಮಧ್ಯ ಮುಕ್ತ, ಆರೋಗ್ಯವಂತ ಗ್ರಾಮ, ಮಧ್ಯ ತ್ಯಜಿಸಿ ಆರೋಗ್ಯ ಉಳಿಸಿ, ಪ್ರತಿಯೊಬ್ಬ ನಾಗರಿಕರು ಮಧ್ಯ ಮತ್ತು ತಂಬಾಕು ಸೇವನೆಯಿಂದ ದೂರವಿದ್ದು ಆರೋಗ್ಯವಂತ ಜೀವನ ಸಾಗಿಸಬೇಕು. ಇಂದು ಆರೋಗ್ಯವಾಗಿ ಬದುಕಲು ದುಶ್ಚಟಗಳಿಂದ ದೂರವಿರಬೇಕು ಎಂದರು. ನಂತರ ಪ್ರತಿಜ್ಞಾವಿಧಿ ಬೋಧಿಸಿ ಬಿತ್ತಿಪತ್ರ ಪ್ರದರ್ಶಿಸಲಾಯಿತು.

ಗ್ರಾಪಂ ಉಪಾಧ್ಯಕ್ಷ ಯಮನೂರಪ್ಪ ಗೊರವರ, ಸದಸ್ಯರಾದ ಮೈಲಾರಪ್ಪ ಕಲ್ಗುಡಿ, ಕೃಷ್ಣಪ್ಪ ಮೇಟಿ, ನಾಗರಾಜ, ಪಂಚಾಯಿತಿ ಕಾರ್ಯದರ್ಶಿ ಹನುಮಂತಪ್ಪ, ಶಿಕ್ಷಕ ಗವಿಸಿದ್ದಪ್ಪ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಸಿದ್ದಲಿಂಗಮ್ಮ ವೀರೇಶ ಹಾಲಗುಂಡಿ, ನಿಂಗಪ್ಪ ಕುರಿ, ಭರಮಪ್ಪ ಗುತ್ತೂರ, ತಿಮ್ಮಣ್ಣ ಮುಂಡರಗಿ, ಕಾಯಕಮಿತ್ರ ಅನ್ನಪೂರ್ಣ ಗೊಂದಿಹೊಸಳ್ಳಿ, ಗ್ರಂಥಪಾಲಕಿ ಅರುಣಾ ಗಬ್ಬೂರು, ಪ್ರಮುಖರಾದ ಅನುರಾಧ ಬಾಳೆತೋಟ, ಸಂಜೀವರಾಯ, ಮಹೇಶ, ಹನುಮಂತ ಇತರರಿದ್ದರು.