ಅಳವಂಡಿ: ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯ ಉಪ ಕಾಲುವೆಗೆ ಸರ್ಕಾರ ಸುಮಾರು 110 ಎಕರೆ ಭೂ ಸ್ವಾಧೀನಪಡಿಸಿಕೊಂಡಿದೆ. ರೈತರಿಗೆ ಸುಮಾರು 11 ಕೋಟಿ ಹಣ ನೀಡಬೇಕಿದೆ. ಶೀಘ್ರ ಪರಿಹಾರ ನೀಡದಿದ್ದರೆ ಸತ್ಯಾಗ್ರಹ ನಡೆಸಲಾಗುವುದು ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯ ಹೋರಾಟ ಸಮಿತಿ ಅಧ್ಯಕ್ಷ ಶರಣಪ್ಪ ಜಡಿ ತಿಳಿಸಿದರು.
ಗ್ರಾಮದಲ್ಲಿ ಮಂಗಳವಾರ ಅಳವಂಡಿ-ಬೆಟಗೇರಿ ಏತ ನೀರಾವರಿ ಹೋರಾಟ ಸಮಿತಿ ಸದಸ್ಯರ ಸಭೆಯಲ್ಲಿ ಮಾತನಾಡಿ, ಏತ ನೀರಾವರಿ ಯೋಜನೆಗೆ ಕವಲೂರು, ಹಂದ್ರಾಳ, ಅಳವಂಡಿ, ಹಿರೇಸಿಂದೋಗಿ, ಮೈನಹಳ್ಳಿ, ಬಿಕನಳ್ಳಿ, ತಳಕಲ್, ಕೋಮಲಾಪುರ ಗ್ರಾಮಗಳ ರೈತರ ಜಮೀನುಗಳು ಉಪ ಕಾಲುವೆ ನಿರ್ಮಾಣಕ್ಕೆ ಸ್ವಾಧಿನ ಪಡಿಸಿಕೊಳ್ಳಲಾಗಿದೆ. ಐದಾರು ವರ್ಷ ಕಳೆದರೂ ರೈತರಿಗೆ ಸೂಕ್ತ ಪರಿಹಾರ ನೀಡುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಕೂಡಲೇ ರೈತರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಪ್ರಮುಖರಾದ ನಾಗಪ್ಪ ಸವಡಿ, ದೇವಪ್ಪ ಕಟ್ಟಿಮನಿ, ಭೀಮರಡ್ಡಿ ಗದ್ದಿಕೇರಿ, ಜಗನ್ನಾಥ ರಡ್ಡಿ, ಚಂದ್ರಪ್ಪ ಜಂತ್ಲಿ, ಈಶಪ್ಪ ಜೋಳದ, ವೀರಣ್ಣ ಶೆಟ್ಟರ್, ಪರಪ್ಪ ನಾಗರಳ್ಳಿ, ಪ್ರಕಾಶ ಹೆಸರೂರು, ಗುರುಬಸವರಾಜ ಬೋಚನಹಳ್ಳಿ, ಬಸವರಡ್ಡಿ ಮೂಲಿಮನಿ, ಮಹಾಂತೇಶ, ಪ್ರಭುಗೌಡ, ಪುಟ್ಟರಾಜ, ಚಂದ್ರು ಮಾಲಿಪಾಟೀಲ, ಬಸವರಾಜ ಯರಾಶಿ, ಸಂಜೀವಗೌಡ, ದೇವಪ್ಪ, ವಿರುಪಾಕ್ಷಯ್ಯ, ಬಸವರಡ್ಡಿ, ಪಕೀರೇಶ, ಸುಭಾಷ್ ರಡ್ಡಿ ಇತರರು ಇದ್ದರು.