ಜಿಲ್ಲೆ

ಆಳಂದ: ಮಹಾತ್ಮರ ತತ್ವಾದರ್ಶ ಅಳವಡಿಸಿಕೊಳ್ಳೋಣ

ಕೃಷ್ಣ ಕುಲಕರ್ಣಿ

ಆಳಂದ: ರಾಷ್ಟçಪಿತ ಮಹಾತ್ಮ ಗಾಂಧಿ ಅವರು ಶ್ರೇಷ್ಠ ನಾಯಕರಿದ್ದು, ಅಹಿಂಸೆ ಮೂಲಕವೇ ದೇಶಕ್ಕೆ ಸ್ವಾತಂತ್ರÈ ತಂದು ಮಹನೀಯರು. ಸತ್ಯವನ್ನೇ ದೇವರೆಂದು ನಂಬಿ ಉಪಾಸನೆ ಮಾಡಿದ್ದು, ಅವರ ನಮಗೆ ನೀಡಿದ ಮೌಲ್ಯಗಳು ಸಾರ್ವಕಾಲಿಕವಾಗಿವೆ ಎಂದು ಮಾಡಿಯಾಳದ ವಪ್ಪತೇಶ್ವರ ಮಠದ ಪೀಠಾಧಿಪತಿ ಶ್ರೀ ಮರುಳಸಿದ್ಧ ಸ್ವಾಮೀಜಿ ನುಡಿದರು.

ಧಂಗಾಪುರದ ಇಂದಿರಾ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದೂರ್ ಶಾಸ್ತಿç ಜಯಂತ್ಯುತ್ಸವದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಗಾಂಧೀಜಿ ಅವರು ಸರ್ವ ಸಮುದಾಯಗಳನ್ನು ಸಮಾನವಾಗಿ ಕಂಡಿದ್ದರು. ಜಾತಿ, ಮತ, ಪಂಥಗಳನ್ನು ಮೀರಿದ ಸಮಾಜ ಕಟ್ಟಲು ಶ್ರಮಿಸಿದರು. ನಾಯಕ ಮತ್ತು ಜನಸಾಮಾನ್ಯರ ಮಧ್ಯೆ ಯಾವುದೇ ವ್ಯತ್ಯಾಸ ಇರಬಾರದು. ಪ್ರತಿ ನಾಗರೀಕರಿಗೂ ತ್ವರಿತಗತಿಯಲ್ಲಿ ನ್ಯಾಯ ಸಿಗಬೇಕು. ಭ್ರಷ್ಟಾಚಾರ ರಹಿತ ಆಡಳಿತ ವ್ಯವಸ್ಥೆ ನಮ್ಮದಾಗಬೇಕು ಎಂದರು.

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಅಪ್ಪಾಸಾಹೇಬ ತೀರ್ಥೆ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಶ್ಮೀತಾ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ಸಿಆರ್‌ಪಿ ಅಶೋಕ ಗಾಯಕವಾಡ, ಪತ್ರಕರ್ತರಾದ ಡಿ.ಎಂ.ಪಾಟೀಲ್, ಶಾಂತಪ್ಪ ಕೋರೆ, ಗ್ರಾಪಂ ಮಾಜಿ ಸದಸ್ಯ ಆಲೂಗೌಡ ಪಾಟೀಲ್, ಎಸ್‌ಡಿಎಂಸಿ ಅಧ್ಯಕ್ಷ ಯಲ್ಲಪ್ಪ ಮನಿಗಿಣಿ, ಸಂಸ್ಥೆ ಅಧ್ಯಕ್ಷ ಶಿವಲಿಂಗ ತೇಲ್ಕರ್, ಕಾರ್ಯದರ್ಶಿ ವಿಶಾಲಾ ತೇಲ್ಕರ್, ಮುಖ್ಯಗುರು ಅಂಬಿಕಾ ಅಷ್ಠಗಿ, ಪ್ರಮುಖರಾದ ಕೃಷ್ಣ ಕಾಂಬಳೆ, ವಿಘ್ನೇಶ ತೇಲ್ಕರ್, ವೇಣುಬಾಯಿ ನಿಂಬೇಣಿ, ಭಾಗ್ಯಶ್ರೀ ದುಗುಂಡ, ಸಂಗೀತಾ ಕುಂಬಾರ ಇತರರಿದ್ದರು.