ಅರಣ್ಯ ಅಧಿಕಾರಿಗಳು ಸ್ಪಷ್ಟನೆ | ಸುತ್ತಮುತ್ತಲಿನ ಹಳ್ಳಿಗಳಲ್ಲಿ ಎಚ್ಚರ ವಹಿಸಲು ಸೂಚನೆ
ವಿಜಯವಾಣಿ ಸುದ್ದಿಜಾಲ ಆಳಂದ
ಬಂಗರಗಾ ಗ್ರಾಮದಲ್ಲಿ ಚಿರತೆ ಅಲೆದಾಡಿದ್ದು, ಹೆಜ್ಜೆ ಗುರುತುಗಳು ಕಾಣಿಸಿವೆ ಎಂದು ವಲಯ ಅರಣ್ಯ ಅಧಿಕಾರಿ ಜಗನ್ನಾಥ ಕೋರಳ್ಳಿ ತಿಳಿಸಿದರು.
ಗ್ರಾಮಸ್ಥರ ದೂರಿನ ಮೇರೆಗೆ ಬಂಗರಗಾ ಗ್ರಾಮದ ಜಮೀನುಗಳಿಗೆ ಭಾನುವಾರ ಭೇಟಿ ನೀಡಿ, ಹೆಜ್ಜೆ ಗುರುತನ್ನು ಪರಿಶೀಲಿಸಿದ ಅವರು, ಚಿರತೆಯ ಹೆಜ್ಜೆ ಗುರುತು ಇದಾಗಿದೆ. ಸಾಲೇಗಾಂವ್‌ದಲ್ಲಿ ನಾಯಿಯನ್ನು ತಿಂದು ಹಾಕಿದೆ. ಆಹಾರ ಅರಸಿ ಹಳ್ಳಿಗಳಿಗೆ ಬಂದಿರಬಹುದು. ಜನರು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಸಾಲೇಗಾಂವ್, ಬಂಗರಗಾ, ಖಜೂರಿ, ಚಿತಲಿ, ಬಬಲೇಶ್ವರ, ರುದ್ರವಾಡಿ, ಕಿಣ್ಣಿಸುಲ್ತಾನ್, ನಿರಗುಡಿ, ತೀರ್ಥ, ತೇಲಾಕುಣಿ, ಜಮಗಾ ಆರ್., ಹೊದಲೂರ ಸೇರಿ ಸುತ್ತಮುತ್ತಲಿನ ಹಳ್ಳಿಗಳ ಸಾರ್ವಜನಿಕರು ಮತ್ತು ರೈತರು ಜಾಗೃತಿ ವಹಿಸಬೇಕು. ಹೊಲ-ಗದ್ದೆಗೆ ಹೋಗಬೇಕಾದರೆ ಕೈಯಲ್ಲಿ ಕೋಲು ಅಥವಾ ಯಾವುದಾದರೂ ಆಯುಧ ತೆಗೆದುಕೊಂಡು ಹೋಗಿ. ಜಾನುವಾರುಗಳ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದರು.
ಆಳAದ ಉಪ ವಲಯ ಅರಣ್ಯ ಅಧಿಕಾರಿ ರಾಘವೇಂದ್ರ ಗಾಯಕವಾಡ, ಸಿಬ್ಬಂದಿ ತುಕಾರಾಮ ಇತರರಿದ್ದರು.