ಜಿಲ್ಲೆ

ಆಳಂದ; ನ.18ರಂದು ರಂಗ ಸುವರ್ಣ ಪ್ರಶಸ್ತಿ ಪ್ರದಾನ

ಆಳಂದ: ಪ್ರತಿಭೆಗೊAದು ರಂಗ ವೇದಿಕೆ ವಿನೂತನ ಕಾರ್ಯಕ್ರಮದಡಿ ನವೆಂಬರ್ 18 ಮತ್ತು 19ರಂದು ಕಲಬುರಗಿಯ ಎಸ್.ಎಂ.ಪAಡಿತ ರಂಗ ಮಂದಿರದಲ್ಲಿ ರಂಗ ಸುವರ್ಣ ಪ್ರಶಸ್ತಿ ಪ್ರದಾನ ಹಾಗೂ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ರಂಗಮಿತ್ರ ನಾಟ್ಯ ಸಂಘ ಪ್ರಧಾನ ಸಂಯೋಜಕ ಶಂಕರ ಹಿಪ್ಪರ್ಗಿ ತಿಳಿಸಿದರು.

ಕನ್ನಡ ರಾಜೋತ್ಸವದ ಅಂಗವಾಗಿ ರಂಗಭೂಮಿ ಕಲಾವಿದರು, ಕವಿಗಳು, ಸಮಾಜದ ಚಿಂತಕರು, ರಾಜಕೀಯ ಮುಖಂಡರುಗಳ ಸಮ್ಮುಖದಲ್ಲಿ ಜಿಲ್ಲೆಯ 8 ಜನರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾಲೂಕಿನಲ್ಲಿ ಬಹಳಷ್ಟು ಕಲಾವಿದರಿದ್ದು, ಅಂತಹವರನ್ನು ಪ್ರೋತ್ಸಾಹಿಸಲು ಈ ಸಲ ಆಳಂದನ ಸಂಗೀತಗಾರ ಅಶೋಕ ಬಸವರಾಜ ತೇಲಿ ಅವರಿಗೆ ರಂಗ ಸುವರ್ಣ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಕಲೆಗೆ ಯಾವುದೇ ಪ್ರೋತ್ಸಾಹವಿಲ್ಲದೆ ಅವನತಿ ಕಾಣುತ್ತಿವೆ. ಜಿಲ್ಲೆ ಸೇರಿ ಅನೇಕ ಕಲಾವಿದರು ನಾಡಿಗೆ ಕೊಡುಗೆ ನೀಡಿದ್ದಾರೆ. ಅಂತಹ ಮಹಾಚೇತನಗಳನ್ನು ಮುಖ್ಯವಾಹಿನಿಗೆ ಕರೆ ತರಲು ರಂಗಮಿತ್ರ ಸಂಘ ಶ್ರಮಿಸುತ್ತಿದ್ದು, ನಶಿಸಿ ಹೋಗುತ್ತಿರುವ ಜಾನಪದ ಕಲೆಯನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಸಂತೋಷ ಖನ್ನಾ, ಸುಭಾಷ ಮೋಘಾ, ಅಶೋಕ ತೇಲಿ, ಕಾಶೀನಾಥ ಬಿರಾದಾರ, ಬಸವರಾಜ ತೇಲಿ, ಸುರೇಶ ಆಳಂದ, ಶಿವಶರಣಪ್ಪ ಪೂಜಾರಿ ಇದ್ದರು.