ಲಮೇಲ ಪಟ್ಟಣದ ನೂತನ ತಾಲೂಕು ತಹಸೀಲ್ದಾರ್ ಕಚೇರಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿ ಪರಿಶೀಲಿಸಿದರು. ಇಂಡಿ ಎಸಿ ಚಂದ್ರಕಾಂತ ಗಡದೆ, ಆಲಮೇಲ ತಹಸೀಲ್ದಾರ್ ಸುರೇಶ ಚವಲರ್, ಪಿಡಬ್ಲೂೃಡಿ ಇಂಜಿನಿಯರ್ ತಾರಾನಾಥ ರಾಠೋಡ, ಪಪಂ ಮುಖ್ಯಾಧಿಕಾರಿ ಅಭೀಷೇಕ ಪಾಂಡೆ, ಕಂದಾಯ ನಿರೀಕ್ಷಕ ಎಂ.ಎ. ಅತ್ತಾರ ಇದ್ದರು. 
ಜಿಲ್ಲೆ

ತಾಲೂಕು ತಹಸೀಲ್ದಾರ್ ಕಚೇರಿಗೆ ಜಿಲ್ಲಾಧಿಕಾರಿ ಭೇಟಿ


ಆಲಮೇಲ: ಪಟ್ಟಣದ ಇಂಡಿ ರಸ್ತೆ ಕೃಷ್ಣಾ ಭಾಗ್ಯ ಜಲ ನಿಗಮದ ಕಟ್ಟಡದಲ್ಲಿ ಜು.26 ರಂದು ಸಚಿವ ಉಮೇಶ ಕತ್ತಿ ಅವರಿಂದ ಉದ್ಘಾಟನೆಗೊಳ್ಳಲಿರುವ ನೂತನ ತಾಲೂಕು ಕಚೇರಿ ಕಟ್ಟಡಕ್ಕೆ ಬುಧವಾರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿ ಪರಿಶೀಲಿಸಿದರು.ಕಾರ್ಯಕ್ರಮದ ಪೂರ್ವ ಸಿದ್ಧತೆ ಕುರಿತು ಸ್ಥಳದಲ್ಲಿದ್ದ ಇಂಡಿ ಉಪ ವಿಭಾಗಾಧಿಕಾರಿ ಚಂದ್ರಕಾಂತ ಗಡದೆ, ಆಲಮೇಲ ತಹಸೀಲ್ದಾರ್ ಸುರೇಶ ಹಾಗೂ ಪಪಂ ಮುಖ್ಯಾಧಿಕಾರಿ ಅಭೀಷೇಕ ಪಾಂಡೆ, ಕಂದಾಯ ನಿರೀಕ್ಷಕ ಎಂ.ಎ. ಅತ್ತಾರ ಅವರಿಂದ ಸಮಗ್ರ ಮಾಹಿತಿ ಪಡೆದರು.

ಪಿಡಬ್ಲೂೃಡಿ ಇಂಜಿನಿಯರ್ ತಾರಾನಾಥ ರಾಠೋಡ, ಪಪಂ ಸಿಬ್ಬಂದಿ ಬಿ.ಜಿ. ನಾರಾಯಣಕರ, ಲಾಲಸಾಬ ದೇವರಮನಿ, ಕಂದಾಯ ಇಲಾಖೆಯ ಎಂ.ಎ. ಅವರಾದಿ, ಗುರುರಾಜ ಗತಾಟೆ, ಆನಂದ ವಾಲಿಕಾರ, ಪೊಲೀಸ್ ಠಾಣೆ ಎಎಸ್‌ಐ ಎಂ.ಆರ್. ಕಂಚಗಾರ, ದಸ್ತಗೀರ ತರಫದಾರ ಇದ್ದರು.