ದೇವದುರ್ಗ: ಪಟ್ಟಣದ ಇಮಾನ್ ಹುಸೇನ್ ಅಸರ್ ಖಾನ್ ಮಸೀದಿಯಲ್ಲಿ ಮೊಹರಂ ನಿಮಿತ್ತ ಅಲಾಯಿ ದೇವರ ಪ್ರತಿಷ್ಠಾಪನೆ ಶ್ರದ್ಧಾ ಭಕ್ತಿಯಿಂದ ಶುಕ್ರವಾರ ಸಂಜೆ ನಡೆಯಿತು. ಮುದಗಲ್‌ನಲ್ಲಿ ಆಚರಿಸಲಾಗುವ ಮೊಹರಂ ಅನುಸಾರ ಅಸರ್ ಖಾನ್ ಮಸೀದಿಯಲ್ಲಿ ಪ್ರತಿವರ್ಷ ಅಲಾಯಿ ದೇವರ ಪ್ರತಿಷ್ಠಾಪನೆ ಮಾಡಲಾಗುತ್ತದೆ. ತಾಲೂಕಿನಲ್ಲಿ ಇದೇ ಮಸೀದಿಯಲ್ಲಿ ದೇವರ ಪ್ರತಿಷ್ಠಾಪನೆ ಮೊದಲು ನಡೆಯುತ್ತದೆ. ಭಕ್ತರು ಮಸೀದಿಗೆ ಭೇಟಿ ನೀಡಿ ದರ್ಶನ ಪಡೆದರು.