ಜಿಲ್ಲೆ

ಮಹಿಳೆಯರ ಜಾಗೃತಿಯೊಂದಿಗೆ ಮಕ್ಕಳಿಗೆ ಸಮಗ್ರ ಶಿಕ್ಷಣ :ಎನ್.ಸಿ.ಮೂರ್ತಿ ಅಭಿಪ್ರಾಯ

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಮಹಿಳೆಯರ ಜಾಗೃತಿಯೊಂದಿಗೆ ಮಕ್ಕಳ ಸಮಗ್ರ ಶಿಕ್ಷಣ ಹಾಗೂ ಪ್ರತಿಭಾ ವಿಕಾಸಕ್ಕೆ ಪ್ರೋತ್ಸಾಹ ನೀಡಿದರೆ ಸರ್ವಸಾಮರ್ಥ್ಯಗಳ ಸಾಕಾರದೊಂದಿಗೆ ಸರ್ವೋದಯ ಸಾಧ್ಯ ಎಂದು ಎನ್.ಸಿ.ಮೂರ್ತಿ ಹೇಳಿದರು.

ಮುಡಿಪು ಜನಶಿಕ್ಷಣ ಟ್ರಸ್ಟ್‌ನಲ್ಲಿ ನಿರ್ಮಿಸಲ್ಪಟ್ಟ ಸರ್ವೋದಯ ಮಂಟಪ ಮತ್ತು ಅಕ್ಷರೋತ್ಸವ-ಸ್ವಚ್ಛೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಡಾ.ಜೀವನ್ ಮಾತನಾಡಿ, ದೇಶದ ಜನರು ಮತ್ತು ಜನಸೇವಕರು ಸತ್‌ಚಿಂತನೆ ಮತ್ತು ಸದ್ಭಾವನೆಯಿಂದ ಆತ್ಮಸಾಕ್ಷಿಯಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಸರ್ವೋದಯ ಸಾಧ್ಯ. ಪಾಲರು ತಮ್ಮ ಮಕ್ಕಳ ಪ್ರತಿಭೆಗಳನ್ನು ಬಾಲ್ಯದಲ್ಲೇ ಗುರುತಿಸಿ ಸ್ಪಂದಿಸಿ ಪ್ರೋತ್ಸಾಹಿಸಿದಾಗ ಮಕ್ಕಳು ಭರವಸೆ ಬೆಳಕಾಗುತ್ತಾರೆ ಎಂದರು.

ಗ್ರಾಪಂ ಅಧ್ಯಕ್ಷೆ ಗೀತಾ ಭಂಡಾರಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶೈಲಾ ಕಾರಗಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ, ಮುಖ್ಯಶಿಕ್ಷಕಿ ವಿಜಯಲಕ್ಷ್ಮೀ, ಹೈದರ್ ಕೈರಂಗಳ, ಇಬ್ರಾಹಿಂ ನಡುಪದವು, ಧರ್ಮಗುರು ಶೇಖ್ ಮಹಮ್ಮದ್ ಇರ್ಫಾನಿ, ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ, ಜಿಲ್ಲಾ ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್, ಚಂದ್ರಹಾಸ ಕಣಂತೂರು, ನವಸಾಕ್ಷರರಾದ ಯಶೋದಾ, ನಾರಾಯಣ, ಸುಂದರಿ, ಪ್ರೇರಕಿ ಅರುಣಾ, ಪ್ರಕಾಶ್ ಭಟ್ ಸಾವಿತ್ರಿ, ಚಿತ್ತಾರ ಬಳಗದ ಸತೀಶ್ ಇರಾ, ವೆಂಕಟೇಶ್, ಜಿಲ್ಲಾ ಆಶಾ ಕಾರ್ಯಕರ್ತೆಯರ ಮೆಂಟರ್ ಕುಮುದಾ, ಜಿಲ್ಲಾ ಆರೋಗ್ಯ ಸಂಯೋಜಕಿ ತೇಜಶ್ರೀ, ಮಿಷನ್ ಶಕ್ತಿಯ ಜೆಂಡರ್ ಸ್ಪೆಷಲಿಸ್ಟ್ ವಿಶಾಲಾಕ್ಷಿ, ತೆರಿಗೆ ಸಲಹೆಗಾರ ಪುಂಡರಿಕಾಕ್ಷ, ಸಿಆರ್‌ಪಿ ಮಲ್ಲಿಕಾರ್ಜುನ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಮ್ಮದ್ ಅಶ್ರಫ್, ಅಬೂಬಕ್ಕರ್ ಜಲ್ಲಿ, ಬನ್ನೂರು ಪಂಚಾಯಿತಿ ಸದಸ್ಯ ಶ್ರೀನಿವಾಸ್, ಸುಗ್ರಾಮದ ಶಕೀಲಾ, ಇಸ್ಮಾಯಿಲ್ ಕಣಂತೂರು ಮೊದಲಾದವರು ಉಪಸ್ಥಿತರಿದ್ದರು.

ಪುಸ್ತಕ ಬಿಡುಗಡೆ, ಸನ್ಮಾನ

ಸ್ಮೈಲ್ ಸ್ಕಿಲ್‌ಸ್ಕೂಲ್, ಸಾಂತ್ವನ ಕೇಂದ್ರ ಮತ್ತು ಪಿಎಂಶ್ರೀ ಹೂಹಾಕುವ ಕಲ್ಲು ದ.ಕ. ಜಿಪಂ ಉನ್ನತೀಕರಿಸಿದ ಹಿ.ಪ್ರಾ. ಶಾಲೆಯಿಂದ ಹೊರತಂದ ಸ್ವಚ್ಛ ಮನೆ ಸ್ವಯಂ ಘೋಷಣಾ ಪತ್ರ ಪುಸ್ತಕಗಳನ್ನು ನರೇಗಾ ಮಾಜಿ ಒಂಬುಡ್ಸ್‌ಮನ್ ಶೀನ ಶೆಟ್ಟಿ ಬಿಡುಗಡೆಗೊಳಿಸಿದರು. ಕೌಶಲ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಸ್ಕಿಲ್ ಇನ್ ವಿಲೇಜ್ ಯೋಜನೆ ಶಿಕ್ಷಕಿಯರನ್ನು ಗೌರವಿಸಲಾಯಿತು. ಸಿಮರೋಬ ಔಷಧ ಗಿಡಗಳನ್ನು ವಿತರಿಸಲಾಯಿತು.