ಜಿಲ್ಲೆ

ಅಕ್ಷಯ ತೃತೀಯ; ಉಡುಪಿಯಲ್ಲಿ ಖರೀದಿ ಜೋರು

ಉಡುಪಿ: ಅಕ್ಷಯ ತೃತೀಯ ದಿನ ಚಿನ್ನ ಅಥವಾ ಬೆಳ್ಳಿಯ ವಸ್ತುಗಳನ್ನು ಖರೀದಿಸುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಜನರಲ್ಲಿರುವುದರಿಂದ ಶುಕ್ರವಾರ ಜಿಲ್ಲೆಯ ವಿವಿಧ ಚಿನ್ನಾಭರಣ ಮಳಿಗೆಗಳಲ್ಲಿ ಖರೀದಿ ಭರಾಟೆ ಜೋರಾಗಿತ್ತು.

ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಚಿನ್ನಾಭರಣ ಮಳಿಗೆಗಳಲ್ಲಿ ಗ್ರಾಹಕರಿಗೆ ವಿಶೇಷ ನೀಡಲಾಗಿತ್ತು. ಮೇಕಿಂಗ್​ ಚಾರ್ಜ್ನಲ್ಲಿ ದರ ಕಡಿತ ಸೇರಿದಂತೆ ಬಹಳಷ್ಟು ಆಕರ್ಷಣಿಯ ಕೊಡುಗೆಗಳಿದ್ದವು. ಚಿನ್ನಾಭರಣ ಮಳಿಗೆಗಳನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು, ಗ್ರಾಹಕರಿಗೆ ಹಲವು ಅನುಕೂಲತೆಗಳನ್ನು ಒದಗಿಸಿಕೊಡಲಾಗಿದೆ. ಶುಕ್ರವಾರ ಮುಂಜಾನೆಯಿಂದ ತಡರಾತ್ರಿವರೆಗೂ ಚಿನ್ನಾಭರಣ ಮಳಿಗೆಗಳು ತೆರೆದುಕೊಂಡಿದ್ದವು. ಶುಕ್ರಮೌಢ್ಯದ ಕಾರಣ ಮದುವೆ ಸಮಾರಂಭಗಳು ನಡೆಯದೇ ಇರುವುದರಿಂದ ವಿವಾಹದ ಖರೀದಿಗಳು ಕಡಿಮೆಯಾಗಿದ್ದವು.