ಜಿಲ್ಲೆ

ಸವಣೂರು ಶಾಲೆಯಲ್ಲಿ ಅಕ್ಷಯ ಬುಟ್ಟಿ

Avinash R

ಕಡಬ: ಸವಣೂರು ಸರ್ಕಾರಿ ಉನ್ನತ ಹಿ.ಪ್ರಾ.ಶಾಲೆಯಲ್ಲಿ ಅಕ್ಷಯ ಬುಟ್ಟಿ ಕಾರ್ಯಕ್ರಮ ಇತ್ತೀಚೆಗೆ ಉದ್ಘಾಟನೆಗೊಂಡಿತು. ಉದ್ಯಮಿ, ಹಳೇ ವಿದ್ಯಾರ್ಥಿ ಅಬ್ದುಲ್ ಖಾದರ್ ಖಾಜಿ ಸಹಲ್ ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು.

ಗ್ರಾ.ಪಂ, ಸದಸ್ಯರಾದ ಚಂದ್ರಾವತಿ ಸುಣ್ಣಾಜೆ, ಎಂ.ಎ.ರಫೀಕ್, ಅಬ್ದುಲ್ ರಜಾಕ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಕಾರ್ಯದರ್ಶಿ ಅಬ್ದುಲ್ಲಾ ಎಸ್.ಎ, ಅಲಂಕಾರು ರೋಟಾರಿಯನ್ ನವೀನ್ ಮಾಯಿಲ್ಗ, ಎಸ್‌ಡಿಎಂಸಿ ಉಪಾಧ್ಯಕ್ಷೆ ರೇವತಿ, ನಿಕಟಪೂರ್ವ ಉಪಾಧ್ಯಕ್ಷೆ ಜಯಶ್ರೀ, ಪ್ರಮುಖರಾದ ವೆಂಕಪ್ಪ ಅಡಿಲು, ಶೇಖರ್ ಸವಣೂರು, ಅಬಾಬಿಲ್, ಸತೀಶ್ ಬಲ್ಲಾಯ, ನವ್ಯ , ಗುಲಾಬಿ , ಜೈನಾಬಿ, ಸಫಿಯಾ, ಖತೀಜ ಉಪಸ್ಥಿತರಿದ್ದರು.

ಮುಖ್ಯಶಿಕ್ಷಕ ನಿಂಗರಾಜು ಪ್ರಸ್ತಾವಿಸಿದರು. ಶಶಿಕಲಾ ಸ್ವಾಗತಿಸಿದರು. ನಾಗವೇಣಿ ವಂದಿಸಿದರು. ಗಣೇಶ್ ಕಾರ್ಯಕ್ರಮ ನಿರೂಪಿಸಿದರು.