ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಅಕ್ಷತಾ ಮುಳಗುಂದ ಅವರಿಗೆ ಪಿಎಚ್.ಡಿ. ಪದವಿ ಪ್ರದಾನ ಮಾಡಲಾಯಿತು.
ಅವರು ಮಂಡಿಸಿದ ಆನ್ ಎಕ್ಸಪೆರಿಮೆಂಟಲ್ ಇನ್ವೆಸ್ಟಿಗೇಶನ್ ಆನ್ ದಿ ಪ್ರಾಪರ್ಟೀಸ್ ಆಫ್ ಫೆರೋಸಿಮೆಂಟ್ ಪೊ›ಡ್ಯುಸ್ಡ್ ವಿತ್ ಪಾಲಿಮರ್ ಮಾಡಿಫೈಡ್ ಸಿಲಿಕಾ ಪ್ಯೂಮ್ ಕಾಂಕ್ರಿಟ್ ಎಂಬ ವಿಷಯ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ ನೀಡಲಾಯಿತು.
ಧಾರವಾಡದ ಎಸ್ಡಿಎಂ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ಡಿ.ಕೆ. ಕುಲಕರ್ಣಿ ಮಾರ್ಗದರ್ಶಕರಾಗಿದ್ದರು. ಅಕ್ಷತಾ ಮುಳಗುಂದ ಇವರು ಹುಬ್ಬಳ್ಳಿಯ ವಿದ್ಯಾನಿಕೇತನ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಆನಂದ ಮುಳಗುಂದ ಇವರ ಪುತ್ರಿಯಾಗಿದ್ದಾರೆ.