ರನ್ನಬೆಳಗಲಿ ಪಟ್ಟಣದ ರ‌್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಾವಿತ್ರಿಬಾಯಿ ುಲೆ ಅವರ ಜನ್ಮ ದಿನೋತ್ಸವ ಕಾರ್ಯಕ್ರಮ ಜರುಗಿತು. ರಾಘವೇಂದ್ರ ನೀಲಣ್ಣವರ, ಎಸ್.ಎಲ್.ಕಠಾರೆ, ಸವಿತಾ ಜೋಶಿ, ರೇಣುಕಾ ಬಂಡಿ, ಹಸಿನಾ ಜಮಾದಾರ ಮತ್ತಿತರರಿದ್ದಾರೆ. 
ಜಿಲ್ಲೆ

ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ

Vijayapura - Desk - Gurappa Lokuri

ಮಹಾಲಿಂಗಪುರ: ಸಾವಿತ್ರಿಬಾಯಿ ಪುಲೆ ಅವರು ಶಿಕ್ಷಣದ ಮೂಲಕ ಜನರಿಗೆ ಬದುಕು ಕಟ್ಟಿಕೊಟ್ಟ ಅಕ್ಷರ ಮಾತೆಯಾಗಿದ್ದಾರೆ ಎಂದು ಉಪನ್ಯಾಸಕ ರಾಘವೇಂದ್ರ ನೀಲಣ್ಣವರ ಹೇಳಿದರು.

ರನ್ನಬೆಳಗಲಿ ಪಟ್ಟಣದ ರ‌್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಅಯೋಜಿಸಿದ್ದ ಅಕ್ಷರದ ಅವ್ವ ಸಾವಿತ್ರಿಬಾಯಿ ುಲೆ ಅವರ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾವಿತ್ರಿಬಾಯಿ ಫುಲೆ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗೆ ಬ್ರಿಟಿಷ್ ಸರ್ಕಾರ ಇಂಡಿಯಾಸ್ ಫಸ್ಟ್ ಲೇಡಿ ಟೀಚರ್ ಎಂಬ ಬಿರುದು ನೀಡಿತ್ತು ಎಂದರು.

ಸಾವಿತ್ರಿಬಾಯಿ ುಲೆ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದ ಎಸ್.ಎಲ್.ಕಠಾರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸವಿತಾ ಜೋಶಿ, ರೇಣುಕಾ ಬಂಡಿ, ಹಸಿನಾ ಜಮಾದಾರ, ರೂಪಾ ದಂಡಿನ, ಶೋಭಾ ವೀರಘಂಟಿ, ಕಾಳಮ್ಮ ಬಡಿಗೇರ, ಭಾರತಿ ಮಳ್ಳಿಗೇರಿ ಮತ್ತಿತರರಿದ್ದರು.