ಜಿಲ್ಲೆ

ಅಕ್ಕನ ಬಳಗ ಪದಾಧಿಕಾರಿಗಳ ಪದಗ್ರಹಣ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಜೆ.ಸಿ. ನಗರದಲ್ಲಿರುವ ಅಕ್ಕನ ಬಳಗದಲ್ಲಿ 2024- 25ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜರುಗಿತು.

ನೂತನ ಅಧ್ಯರಾಗಿ ಗೀತಾ ಲಿಂಗರಾಜ ಮುಳ್ಳಳ್ಳಿ, ಉಪಾಧ್ಯರಾಗಿ ನಿರ್ಮಲಾ ಅಂಗಡಿ, ಕಾರ್ಯದರ್ಶಿಯಾಗಿ ನಾಗರತ್ನಾ ಬೆಣ್ಣೂರಮಠ, ಸಹಕಾರ್ಯದರ್ಶಿಯಾಗಿ ರೂಪಾ ಹರ್ತಿ, ಕೋಶಾಧ್ಯರಾಗಿ ವಿಮಲಕ್ಕ ಯಳಮಲಿ ಅವರು ಅಧಿಕಾರ ಸ್ವೀಕರಿಸಿದರು.

ಸಾನ್ನಿಧ್ಯ ವಹಿಸಿದ್ದ ರುದ್ರಾಮಠದ ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿ, ಅಕ್ಕನ ಬಳಗವು ನಿರಂತರವಾಗಿ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ಸಮಾಜದ ಉನ್ನತಿಗೆ ಶ್ರಮಿಸುತ್ತದೆ ಎಂದು ಹೇಳಿದರು.

ಸುಲೋಚನಾ ಭೂಸನೂರ ನಿರೂಪಿಸಿದರು. ಮಂಗಲಾ ಕುಪ್ಪಸ್ತ ಪ್ರತಿಜ್ಞಾವಿಧಿ ಬೋಧಿಸಿದರು. ಶಶಿಕಲಾ ಶಿರಿ ಸ್ವಾಗತಿಸಿದರು.