ಜಿಲ್ಲೆ

ಆ.31ರಿಂದ ಅಕ್ಕ ವಿಶ್ವ ಸಮ್ಮೇಳನ: ಅಮೆರಿಕಾದಲ್ಲಿ ಆಯೋಜನೆ

ಬೆಂಗಳೂರು: ಅಮೆರಿಕ ಕನ್ನಡ ಕೂಟಗಳ ಒಕ್ಕೂಟ (ಅಕ್ಕ), ಅಮೆರಿಕದ ವರ್ಜೀನಿಯಾ ರಾಜ್ಯದ ರಿಚ್​ಮಂಡ್​ ನಗರದಲ್ಲಿ ಆ.31ರಿಂದ ಸೆ.1ರವರೆಗೆ "ಅಕ್ಕ ವಿಶ್ವ ಸಮ್ಮೇಳನ' ಆಯೋಜಿಸಿದೆ.

ಕನ್ನಡ ನಾಡಿನ ಶ್ರೀಮಂತ ಭಾಷೆ, ಕಲೆ, ಪರಂಪರೆ ಮತ್ತು ಸಂಸತಿಯನ್ನು ಸಪ್ತ ಸಾಗರದಾಚೆ ಪಸರಿಸಲು ಸಮ್ಮೇಳನ ಏರ್ಪಡಿಸಲಾಗುತ್ತಿದೆ. "ಕನ್ನಡ ಕಲಿಯೋಣ ಬನ್ನಿ' ವಿಶೇಷ ಕಾರ್ಯಕ್ರಮದಡಿ ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರ ಮಕ್ಕಳಿಗೆ, ಭಾಷೆಯ ಕಲಿಕೆಯಲ್ಲಿ ಆಸಕ್ತಿ ತೋರಿಸುವ ಎಲ್ಲರಿಗೂ ಕನ್ನಡ ಕಲಿಸುವ ಉದ್ದೇಶ ಹೊಂದಿದ್ದೇವೆ. ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲ ಸಂಟನೆಗಳು ಸೇರಿ ಅಮೆರಿಕದ ಶಾಲೆಗಳು&ಕಾಲೇಜುಗಳಲ್ಲಿ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಪರಿಗಣಿಸುವಂತೆ ಕೋರಲು ಪ್ರಯತ್ನಿಸಲಾಗುತ್ತಿದೆ.ಅಕಾಲಿಕವಾಗಿ ನಮ್ಮನ್ನು ಅಗಲಿದ ಕರ್ನಾಟಕ ರತ್ನ ಪುನೀತ್​ ರಾಜ್​ಕುಮಾರ್​ಗೆ ಸಮರ್ಪಿತ ವಿಶೇಷ ಕಾರ್ಯಕ್ರಮ ಇರಲಿದೆ. ಒಟ್ಟು 42 ಅಮೆರಿಕ ಕನ್ನಡ ಸಂಘಗಳು ಸೇರಿ ವಿಶಿಷ್ಠ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷ ರವಿ ಬೋರೆಗೌಡ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಕ್ಕ ಸಂಚಾಲಕ ಡಾ.ನವೀನ್​ ಕೃಷ್ಣ, ಅಕ್ಕ ಭಾರತದ ಸಂಚಾಲಕ ತಿಮ್ಮಪ್ಪಗೌಡ ಮತ್ತಿತರರಿದ್ದರು.

ಸಮ್ಮೇಳನದ ವೈಶಿಷ್ಟ್ಯಗಳೇನು?

ಕನ್ನಡದ ಭಾಷೆ, ಕಲೆ, ಸಾಹಿತ್ಯ,ಸಂಸತಿಯನ್ನು ಅಮೆರಿಕದಲ್ಲಿ ಪ್ರಚಾರ ಮಾಡುವ ಉದ್ದೇಶದಿಂದ ಹಲವು ಸಾಂಸತಿಕ ಕಾರ್ಯಕ್ರಮ ಇರಲಿವೆ. ಎಲ್ಲ ವಯೋಮಾನದವರಿಗೆ ಹಲವು ಬಗೆಯ ಸ್ಪರ್ಧೆಗಳಿವೆ. ವಿಜೇತರಿಗೆ ಗಣ್ಯರಿಂದ ಬಹುಮಾನ ವಿತರಣೆ ಮಾಡಲಾಗುವುದು. ಫ್ಯಾಶನ್​ ಶೋ, ಸಾಹಿತ್ಯ ಗೋಷ್ಠಿ, ಬಿಸಿನೆಸ್​ ಫೋರಂ ಮತ್ತು ವಿಶೇಷ ಖಾದ್ಯ ಇರಲಿದೆ ಎಂದು ರವಿ ಬೋರೆಗೌಡ ಹೇಳಿದರು. ಅಮೆರಿಕ, ಭಾರತ ಮತ್ತು ಕರ್ನಾಟಕದ ವಿವಿಧ ಇಲಾಖೆ ಮತ್ತು ಮಳಿಗೆಗಳನ್ನು ಪ್ರತಿಷ್ಠಾಪಿಸಲಾಗುವುದು. ಜಾನಪದ, ಸಾಹಿತ್ಯ, ಸಿನಿಮಾ ಕುರಿತಾದ ಸಂಗೀತ ಕಾರ್ಯಕ್ರಮಗಳಿವೆ. ಗಾಯಕರಾದ ವಿಜಯ್​ ಪ್ರಕಾಶ್​, ರಾಜೇಶ್​ ಕೃಷ್ಣ, ನವೀನ್​ ಸಜ್ಜು, ಅನುರಾಧ ಭಟ್​ ಮತ್ತು ಅವರ ತಂಡದಿಂದ ಸಂಗೀತ ಕಾರ್ಯಕ್ರಮಗಳು ಜರುಗಲಿವೆ. ಪಾರಂಪರಿಕ ನೃತ್ಯಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ಕರ್ನಾಟಕದ ವಿವಿಧ ಇಲಾಖೆಗಳ ಸಚಿವರು, ಆಧ್ಯಾತ್ಮಿಕ ನಾಯಕರು, ಚಲನಚಿತ್ರ ತಾರೆಗಳು, ಪ್ರಸಿದ್ಧ ಸಾಹಿತಿಗಳು, ಕವಿಗಳು, ಉದ್ಯಮಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಕ್ರೀಡಾ ಚಟುವಟಿಕೆಗಳು, ತಂತ್ರಾನ ವೇದಿಕೆ, ಸಂವಾದ, ಕಲಾ ಪ್ರದರ್ಶನ ಸೇರಿ ಇತರೆ ಸಾಂಸತಿಗಳು ವಿಜೃಂಭಣೆಯಿಂದ ನಡೆಯಲಿವೆ.

| ಮಾದೇಶ ಬಸವರಾಜು, ಅಕ್ಕ ಕಾರ್ಯದರ್ಶಿ.