ಕೊಪ್ಪಳ: ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಸ್ಥಾನ ಸೇರಿ ಕಾರ್ಯನಿರ್ವಾಹಕ ಸಮಿತಿ ಸದಸ್ಯರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಎಲ್ಲ ಹುದ್ದೆಗಳಿಗೂ ಸೋಮವಾರ ಅವಿರೋಧ ಆಯ್ಕೆ ನಡೆಯಿತು. ಕಳಕನಗೌಡ ನರಸನಗೌಡ ಪಾಟೀಲ್ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದರು.
ಶರಣಪ್ಪ ಹ್ಯಾಟಿ, ಕಳಕನಗೌಡ ಪಾಟೀಲ್, ಶೇಖರಪ್ಪ ಮುತ್ತೇನವರ, ಶರಣಗೌಡ ಕೊಂತನೂರ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಅಂತಿಮವಾಗಿ ಕಳಕನಗೌಡ ಹೊರತುಪಡಿಸಿ ಉಳಿದ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದರಿಂದ ಕಳಕನಗೌಡ ಅವಿರೋಧ ಆಯ್ಕೆಯಾದರು. ಉಳಿದಂತೆ ಕಾರ್ಯನಿರ್ವಾಹಕ ಸಮಿತಿಗೆ 20 ಪುರುಷ ಹಾಗೂ 10 ಮಹಿಳಾ ಸದಸ್ಯರೂ ಅವಿರೋಧ ಆಯ್ಕೆಯಾದರು.
ಜಿಲ್ಲಾ ಕಾರ್ಯನಿರ್ವಾಹಕ ಸಮಿತಿಗೆ ಉಮೇಶ ಎತ್ತಿನಮನಿ, ವೀರೇಶ ಬಳಿಗಾರ, ಮಾರ್ತಂಡಯ್ಯ ಎಸ್. ಹಿರೇಮಠ, ವೀರಪ್ಪ ಅಣ್ಣಿಗೇರಿ, ಶಿವಪುತ್ರಪ್ಪ ಕಾಡನವರ, ದೊಡ್ಡಬಸಪ್ಪ ಭತ್ತದ, ರಾಜೇಂದ್ರಕುಮಾರ ಶೆಟ್ಟರ, ರಮೇಶ ಕವಲೂರು. ಎಚ್.ಎಂ ಶಾಂತಬಸಯ್ಯ, ಬಿ.ಗಂಗಾಧರಸ್ವಾಮಿ, ಪ್ರಭಣ್ಣ ಉಪನಾಳ, ರಮೇಶ ಮಹದೇವಪ್ಪ, ಚಂದ್ರಶೇಖರ ಅಕ್ಕಿ, ಮಹಾಂತೇಶ, ಶೇಖರಗೌಡ ಉಳ್ಳಾಗಡ್ಡಿ, ಚನ್ನವಿರನಗೌಡ ಕೋರಿ, ವಿಜಯಮಹಾಂತೇಶ್, ಮಹಾಂತೇಶ ಗೌಡರ, ಶರಣಪ್ಪ ಹುಬ್ಬಳ್ಳಿ ಶಶಿಧರ ಕವಲಿ ಆಯ್ಕೆಯಾದರು.
ಜಿಲ್ಲಾ ಮಹಿಳಾ ಸದಸ್ಯತ್ವ ಸ್ಥಾನಕ್ಕೆ ಅಕ್ಕಮಹಾದೇವಿ ಕಂದಗಲ್ಲ, ಕವಿತಾ ಶಿರೋಳ್, ಲಲಿತಾ ಅಗಡಿ, ಶಿಲ್ಪಾ ದಿವಟರ್, ವಿದ್ಯಾಶ್ರೀ ಮುತ್ತೇನವರ, ಸಾವಿತ್ರಿ ಯಲಬುರ್ಗಿ, ಮಹಾಂತಿ ಪಾಟೀಲ್, ಶರಣಮ್ಮ ಪಾಟೀಲ್, ಶಕುಂತಲಾದೇವಿ ಮಾಲಿಪಾಟೀಲ್, ಸರ್ವಮಂಗಳ ಪಾಟೀಲ್ ನಾಮಪತ್ರ ಸಲ್ಲಿಸಿದ್ದು ವಿರುದ್ಧವಾಗಿ ಯಾರೂ ನಾಮಪತ್ರ ಸಲ್ಲಿಸದಿದ್ದರಿಂದ ಇವರ ಆಯ್ಕೆಯನ್ನು ಅವಿರೋಧವೆಂದು ಚುನಾವಣಾಧಿಕಾರಿ ಘೋಷಿಸಿದರು. ಜಿಲ್ಲಾ ಚುನಾವಣಾಧಿಕಾರಿಗಳಾಗಿ ಸೋಮನಗೌಡ ಪಾಟೀಲ್, ಶರಣಪ್ಪ ಬಳಿಗಾರ, ಎಸ್.ಬಿ. ಸಂತೋಜಿ, ತಾಲೂಕು ಚುನಾವಣಾಧಿಕಾರಿಗಳಾಗಿ ಶರಣಪ್ಪ ಅರಕೇರಿ, ಶಿವಾನಂದ ಬಣಕಾರ, ಬಸವರಾಜ ಅಂಗಡಿ ಕಾರ್ಯನಿರ್ವಹಿಸಿದರು.
ನಾಗಭೂಷಣ ಸ್ವಾಮಿ ತಾಲೂಕು ಅಧ್ಯಕ್ಷ
ಮಹಾಸಭಾ ಕೊಪ್ಪಳ ತಾಲೂಕು ಟಕಕ್ಕೆ ನಾಗಭೂಷಣ ಸ್ವಾಮಿ ಸಾಲಿಮಠ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು. ತಾಲೂಕು
ಕಾರ್ಯನಿರ್ವಾಹಕ ಸಮಿತಿ ಸದಸ್ಯರಾಗಿ ಗವಿಸಿದ್ದಯ್ಯ ಲಿಂಗಬಸಯ್ಯನಮಠ, ಕಳಕಪ್ಪ ಕುಂಬಾರ, ವಿರುಪಾಕ್ಷಯ್ಯ ಹಿರೇಮಠ, ಮಲ್ಲಿಕಾರ್ರ್ಜುನ ಶಿಳ್ಳಿನ್, ಹೇಮಣ್ಣ ಹಣವಾಳ, ಪಂಪಣ್ಣ ಪಲ್ಲೇದ, ಆನಂದ ತೊಡಾಲ, ರಾಯನಗೌಡ ಆಡೂರು, ಸಕ್ರಪ್ಪ ಹೊಸಬಾವಿ, ಈಶಪ್ಪ ಹಡಪದ, ಮೈಲಾರಗೌಡ ಉದ್ದಾರ, ಶಿವರಡ್ಡಿ ಭೂಮಕ್ಕನವರ, ಶರಣಪ್ಪ ವಡಗೇರಿ ಆಯ್ಕೆಯಾದರೆ, ಮಹಿಳಾ ಕಾರ್ಯನಿರ್ವಾಹಕ ಸಮಿತಿಗೆ ಜಯಶ್ರೀ ಸುಂಕದ, ಕೀರ್ತಿ ಪೊಲೀಸ್ಪಾಟೀಲ್, ವಾಣಿಶ್ರೀ ಹಿರೇಮಠ, ಜ್ಯೋತಿ ಶಿಳ್ಳಿನ್ ಆಯ್ಕೆಗೊಂಡರು.