ಜಿಲ್ಲೆ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಾರಂಭ; ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಂದ ಧ್ವಜಾರೋಹಣ

ಕಲಬುರಗಿ: 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ರಾಷ್ಟ್ರ ಧ್ವಜಾರೋಹಣ ನಡೆಸಿದರು.

ಕಸಾಪ ಅಧ್ಯಕ್ಷ ಮನು ಬಳಿಗಾರ್​ ಅವರು ಪರಿಷತ್ತಿನ ಧ್ವಜ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿಯವರು ನಾಡಧ್ವಜಾರೋಹಣ ನಡೆಸಿದರು.

8ಗಂಟೆಗೆ ನಡೆಯಬೇಕಿದ್ದ ಧ್ವಜಾರೋಹಣ 15 ನಿಮಿಷ ತಡವಾಗಿ ನಡೆಯಿತು. ಸಮ್ಮೇಳನಾಧ್ಯಕ್ಷ ಎಚ್​.ಎಸ್​. ವೆಂಕಟೇಶ ಮೂರ್ತಿಯವರು ಈ ವೇಳೆ ಪಾಲ್ಗೊಂಡಿರಲಿಲ್ಲ.