ಧಾರವಾಡ: ಜೀವನದಲ್ಲಿ ಬರುವ ಬಹುತೇಕ ಸಮಸ್ಯೆಗಳಿಗೆ ಭಗವದ್ಗೀತೆ ಸಮಾಧಾನ ಹಾಗೂ ನೆಮ್ಮದಿ ನೀಡುತ್ತದೆ. ಗೀತೆಯ ನಿತ್ಯ ಪಠಣ, ಅಧ್ಯಯನ ಅವಶ್ಯ ಎಂದು ಗೀತಾ ಅಭಿಯಾನದ ಸಂಚಾಲಕ ಜಿ.ಆರ್. ಭಟ್ ಹೇಳಿದರು.
ಗೀತಾ ಅಭಿಯಾನ 2023ರ ಮಹಾಸಮರ್ಪಣೆಯ ಅಂಗವಾಗಿ ನಗರದ ಶೃಂಗೇರಿ ಶಂಕರ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಅಖಂಡ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗೀತಾ ಅಭಿಯಾನದ ಅಂಗವಾಗಿ ನಗರ ಹಾಗೂ ಸುತ್ತಲಿನ ಸುಮಾರು 50ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳಲ್ಲಿ 2 ತಿಂಗಳಿ0ದ ಗೀತಾಪಠಣ ಪ್ರಶಿಕ್ಷಣ ಹಾಗೂ ಸಪ್ತಾಹಗಳನ್ನು ನಡೆಸಲಾಗಿದೆ. ಗೀತಾ ಶ್ಲೋಕ ಕಂಠಪಾಠ ಹಾಗೂ ಇತರ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು.
ವಕೀಲ ಆರ್.ಡಿ. ಕುಲಕರ್ಣಿ ಮಾತನಾಡಿ, ಮಾತೆಯರು ತಮ್ಮ ಮಕ್ಕಳಿಗೆ ಗೀತೆಯ ಮಹತ್ವ ತಿಳಿಸಿ ನಿತ್ಯ ಪಠಣ, ಅಧ್ಯಯನ ಮÁಡುವಂತೆ ಪ್ರೇರೇಪಿಸಬೇಕು ಎಂದರು.
ನೂರಾರು ಮಹಿಳೆಯರು ಗೀತೆಯ ಅಖಂಡ ಪಾರಾಯಣ ನಡೆಸಿಕೊಟ್ಟರು. ಶೃಂಗೇರಿ ಮಠದ ಧಾರವಾಡ ಶಾಖಾ ಮುಖ್ಯಸ್ಥ ಶೆಟ್ಟಿ, ವಿ.ಎಂ. ಭಟ್, ಜಿ.ಕೆ. ಹೆಗ್ಡೆ, ಎಸ್.ಎನ್. ಭಟ್, ವಿಜಯಾ ನಾಯಕ್, ಮಧುರಾ ಹೆಗಡೆ, ಇತರರಿದ್ದರು.