ವಿಶ್ವ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ಚಾಂಪಿಯನ್‌ಷಿಪ್‌ನ 10 ವರ್ಷದೊಳಗಿನ ಬಾಲಕಿಯರ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ ಆಜ್ಞಳನ್ನು ಆಕೆಯ ಊರಿನಲ್ಲಿ ಸ್ವಾಗತಿಸಲಾಯಿತು. ಶಿವಕುಮಾರ್, ಮಂಜುನಾಥ, ಚಂದ್ರು ಮೂಡ್ಲಿಗೌಡ, ಅರುಣ್ ರಾವ್ ಮತ್ತಿತರರು ಇದ್ದರು. 
ಜಿಲ್ಲೆ

ಚಿನ್ನದ ಪದಕ ಗಳಿಸಿದ ಆಜ್ಞಗೆ ತವರಿನಲ್ಲಿ ಅದ್ದೂರಿ ಸ್ವಾಗತ

ಕುಶಾಲನಗರ: ಇಂಡೋನೇಷ್ಯಾದಲ್ಲಿ ನಡೆದ ವಿಶ್ವ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ಚಾಂಪಿಯನ್‌ಷಿಪ್‌ನ 10 ವರ್ಷದೊಳಗಿನ ಬಾಲಕಿಯರ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಧಾನದ ಜತೆಯಲ್ಲಿ ಚಿನ್ನದ ಪದಕ ಗಳಿಸಿದ ಆಜ್ಞ ಗುರುವಾರ ತನ್ನ ಊರಿಗೆ ಆಗಮಿಸಿದ ಸಂದರ್ಭದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀ ಹನುಮ ಸೇನಾ ಸೇವಾ ಸಮಿತಿ ವತಿಯಿಂದ ಕೂಡಿಗೆ ಕೂಡುಮಂಗಳೂರು ವ್ಯಾಪ್ತಿಯ ರಾಜ್ಯ ಹೆದ್ದಾರಿಯಲ್ಲಿ ತೆರೆದ ವಾಹನದ ಮೂಲಕ ಕೂಡಿಗೆ ಡೇರಿ ಸರ್ಕಲ್, ಕೂಡಿಗೆ ಸೋಮವಾರಪೇಟೆ ಸರ್ಕಲ್ ಮೂಲಕ ಮೆರವಣಿಗೆ ನಡೆಸಲಾಯಿತು. ದಾರಿಯುದ್ದಕ್ಕೂ ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸಲಾಯಿತು.

ಹನುಮ ಸೇನಾ ಸೇವಾ ಸಮಿತಿ ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಮಂಜುನಾಥ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯ ಚಂದ್ರು ಮೂಡ್ಲಿಗೌಡ, ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಅರುಣ್ ರಾವ್, ಸಮಿತಿ ಪ್ರಮುಖರಾದ ಕಿಶೋರ್ ಕುಮಾರ್, ಸುನಿಲ್ ರಾವ್, ಧರ್ಮ, ಗುರುಪ್ರಸಾದ್, ನವೀನ್, ರೀಜೂ, ಕೂಡುಮಂಗಳೂರು ರಾಜ, ಮಂಜು, ಶ್ರೀನಿವಾಸ್, ಸಮಿತಿಯ ನಿರ್ದೇಶಕರು ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.