ಶಿಗ್ಗಾಂವಿ: ತಾಲೂಕಿನ ಕಡಹಳ್ಳಿ ಗ್ರಾಮದಲ್ಲಿ ತಕ್ಷಣವೇ ವಿದ್ಯುತ್ ಪರಿವರ್ತಕ ಬದಲಿಸುವ ಮೂಲಕ ಹೆಸ್ಕಾಂ ಅಧ್ಯಕ್ಷ ಅಜೀಂಪೀರ್ ಖಾದ್ರಿ ಅವರು ರೈತರ ಮನವಿಗೆ ಸ್ಪಂದಿಸಿದರು.
ಗ್ರಾಮದಲ್ಲಿನ ವಿದ್ಯುತ್ ಪರಿವರ್ತಕದಿಂದ ಕಡಿಮೆ ವೋಲ್ಟೇಜ್ ಸರಬರಾಜಾಗುತ್ತಿದೆ. ಇದರಿಂದ ಕೃಷಿ ಬೋರ್‌ವೆಲ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದೆ ಪಂಪ್‌ಸೆಟ್‌ಗಳು ಕೆಡುತ್ತಿವೆ. ಜತೆಗೆ ಬೆಳೆಗಳಿಗೆ ಸರಿಯಾಗಿ ನೀರು ಹಾಯಿಸಲಾಗುತ್ತಿಲ್ಲ. ಇದರಿಂದ ಬೆಳೆಗಳು ಒಣಗಿ ರೈತರು ನಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಕಡಿಮೆ ವೋಲ್ಟೇಜ್ ಪರಿವರ್ತಕ ಬದಲಿಸಿ ಹೆಚ್ಚಿನ ವೋಲ್ಟೇಜ್ ಪರಿವರ್ತಕ ಅಳವಡಿಸಬೇಕು ಎಂದು ರೈತರು ಖಾದ್ರಿ ಅವರಿಗೆ ಬುಧವಾರ ಮನವಿ ಸಲ್ಲಿಸಿದ್ದರು.
ತಕ್ಷಣವೇ ರೈತರ ಸಮ್ಮುಖದಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಿ ಹೆಚ್ಚಿನ ವಿದ್ಯುತ್ ಸರಬರಾಜು ಮಾಡುವ ಪರಿವರ್ತಕ ಬದಲಿಸಿ ರೈತರಿಗೆ ಅನುಕೂಲ ಕಲ್ಪಿಸಿದರು.
ರೈತರಾದ ಚನ್ನವೀರ ಹಿರೇಮಠ, ಅಣ್ಣಪ್ಪ ಲಮಾಣಿ, ನಿಸಾರಅಹ್ಮದ ಪಾನವಾಲಾ, ರುದ್ರಯ್ಯ ಚಿಕ್ಕಮಠ, ಚನ್ನಬಸಯ್ಯ ಹಿರೇಮಠ, ಬಸಯ್ಯ ಹಿರೇಮಠ, ಸಿದ್ದಲಿಂಗಯ್ಯ ಹಿರೇಮಠ ಸೇರಿದಂತೆ ಹೆಸ್ಕಾಂ ಸಿಬ್ಬಂದಿ, ಅನೇಕ ರೈತರು ಉಪಸ್ಥಿತರಿದ್ದರು.