ಜಿಲ್ಲೆ

ಅಜಯ್ ವಾರಿಯರ್‌ರಿಂದ ಕೀರ್ತನ ಸೇವೆ

Mangaluru - Hariprasad Rai


ಮಂಗಳೂರು : ಬಹುಭಾಷಾ ಗಾಯಕ ಅಜಯ್ ವಾರಿಯರ್ ಅವರು ನಗರದ ಬೋಳೂರಿನ ಮಾತಾ ಅಮೃತಾನಂದಮಯಿ ಮಠದ ಬ್ರಹ್ಮಸ್ಥಾನ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಕ್ಷೇತ್ರದ ಪೂಜೆಯಲ್ಲಿ ಭಾಗವಹಿಸಿ ಕೀರ್ತನ ಸೇವೆನಡೆಸಿದರು. ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ವತಿಯಿಂದ ಅಧ್ಯಕ್ಷ ಸುರೇಶ್ ಅಮೀನ್ ಸನ್ಮಾನಿಸಿದರು.ಅಮೃತ ವಿದ್ಯಾಲಯದ ಪ್ರಾಂಶುಪಾಲೆ ಅಕ್ಷತಾ ಶೆಣೈ , ಕ್ಯಾಂಪಸ್ ನಿರ್ದೇಶಕ ಯತೀಶ್ ಬೈಕಂಪಾಡಿ,ದಿಲೀಪ್ ಕುಮಾರ್ ಉಪಸ್ಥಿತರಿದ್ದರು.