Airport ompound work halted, 
ಜಿಲ್ಲೆ

ವಿಮಾನ ನಿಲ್ದಾಣಕ್ಕೆ ಭೂಸಂತ್ರಸ್ತರಿAದ ರೆಡ್ ಸಿಗ್ನಲï ಪರಿಹಾರಕ್ಕಾಗಿ ಕಾಂಪೌAಡ್ ಕಾಮಗಾರಿ ಸ್ಥಗಿತ

ರಾಯಚೂರು ಜಿಲ್ಲೆಯ ಬಹುದಿನಗಳ ಕನಸಾದ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲï ಸಿಕ್ಕರೂ ಭೂಸಂತ್ರಸ್ತರು ಮಾತ್ರ ರೆಡ್ ಸಿಗ್ನಲï ತೋರಿಸುತ್ತಿದ್ದು, ಸಮರ್ಪಕವಾಗಿ ಭೂ ಪರಿಹಾರ, ಪರ್ಯಾಯ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿ ಕಳೆದ ಒಂದು ವಾರದಿಂದ ನಿಲ್ದಾಣದ ಕಾಂಪೌAಡ್ ನಿರ್ಮಾಣಕ್ಕೆ ಅಡ್ಡಿ ಪಡಿಸಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆ ವೇಳೆ ದೇವದುರ್ಗ ವಿಧಾನಸಭಾ ಕ್ಷೇತ್ರದ ನಾನಾ ಅಭಿವೃದ್ಧಿ ಕಾಮಗಾರಿ ಚಾಲನೆ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿz್ದÁಗ ಅಡಿಗಲ್ಲು ಸಮಾರಂಭ ನೆರವೇರಿತ್ತು. ಆದರೆ ಕಾಮಗಾರಿಗೆ ಚಾಲನೆ ನೀಡಿ ೨.೩ ವರ್ಷ ಕಳೆದರು ಸ್ಥಳೀಯವಾಗಿ ಸಮಸ್ಯೆ ಬಹೆಹರಿದೆ ಕೇವಲ ಕಾಂಪೌAಡ್ ನಿರ್ಮಾಣಕ್ಕೆ ಸಿಮೀತವಾಗಿರುವುದರಿಂದ ಸರ್ಕಾರದ ನಿರ್ಲಕ್ಷಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಪರಿಹಾರ ನೀಡಲು ಒತ್ತಾಯ

ಜಿ¯್ಲೆಯ ಜನರ ಬಹುದಿನಗಳ ಬೇಡಿಕೆಯಾದ ವಿಮಾನ ನಿಲ್ದಾಣಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಗ್ರೀನ್ ಸಿಗ್ನಲï ನೀಡಿದೆ. ನಗರದ ಹೊರವಲಯದ ಯರಮರಸ್ ಬಳಿ ರಾಯಚೂರು ಡೊಮೆಸ್ಟಿಕ್ ಗ್ರೀನ್ ಫೀಲ್ಡï ಏರ್‌ಪೋರ್ಟ್ ಸ್ಥಾಪನೆಗೆ ಇತ್ತಿಚ್ಚಿಗೆ ಪರಿಸರ ಇಲಾಖೆ ಅನುಮತಿ ನೀಡಿದ್ದರಿಂದ ಜಿಲ್ಲಾಽಕಾರಿ ನಿತೀಶ್ ಕೆ., ನೇತೃತ್ವದಲ್ಲಿ ಸಾರ್ವಜನಿಕ ಸಭೆಗಳನ್ನು ಮಾಡಲಾಯಿತು. ಆದರೆ ೨೨ ಎಕರೆ ಪ್ರದೇಶದಲ್ಲಿ ಏಗನೂರು ಹಾಗೂ ಯರಮರಸ್ ದಂಡನ ವಾಸ ಮಾಡುವ ಒಟ್ಟು ೧೦೮ ಕುಟುಂಬಗಳು ವಿಮಾನ ನಿಲ್ದಾಣಕ್ಕೆ ಮನೆ, ಜÁಗ,ಜಮೀನುಗಳನ್ನ ಕಳೆದುಕೊಳ್ಳುತ್ತಿದ್ದು, ತಮ್ಮ ಅಸಮಾಧಾನಗಳನ್ನ ಹೊರಹಾಕುತ್ತಿz್ದÁರೆ.

ಜಿಲ್ಲಾಡಳಿತ ಸಮರ್ಪಕವಾಗಿ ಭೂ ಪರಿಹಾರ ಕೊಡುವ ಬಗ್ಗೆ ಸರ್ಕಾರ ಅಽಕಾರಿಗಳು ಮಾತನಾಡುತ್ತಿಲ್ಲ. ಪರಿಹಾರ ವಿತರಣೆ ಇನ್ನೂ ಆರಂಭಿಸಿಲ್ಲ. ಭೂಸಂತ್ರಸ್ತರ ಬೇಡಿಕೆಯಂತೆ ಪರಿಹಾರ ನೀಡದೇ ಜಿ¯್ಲÁಡಳಿತ ಕನಿಷ್ಠ ಪರಿಹಾರ ನೀಡುವ ಮಾತನಾಡುತ್ತಿದೆ. ಜತೆಗೆ ಹಳ್ಳದ ಪಕ್ಕದಲ್ಲಿ ಮನೆಗಳ ನಿರ್ಮಾಣ ಮಾಡುತ್ತಿದೆ ಇದು ವಾಸ ಮಾಡುವ ಸ್ಥಳವಲ್ಲ ಎಂದು ನಿಲ್ದಾಣದ ಸುತ್ತಲು ಆರಂಭಿಸಿದ ಕಾಂಪೌಡ್ ನಿರ್ಮಾಣವನ್ನು ಸಂಪೂರ್ಣವಾಗಿ ಬಂದ್ ಮಾಡಿಸಿದ್ದಾರೆ.

ಅನುದಾನ ಎಷ್ಟು?

ಒಟ್ಟು ೩೪೩ ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡುವ ವಿಮಾನ ನಿಲ್ದಾಣಕ್ಕೆ ಬಿಜೆಪಿ ಸರ್ಕಾರದ ಅವದಿಯಲ್ಲಿ ೧೮೦ ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿತ್ತು. ರೈಟ್ಸ್ ಸಂಸ್ಥೆ ನೀಡಿದ್ದ ೨೧೯ ಕೋಟಿ ರೂ ಅಂದಾಜು ವಿಸ್ತÈತ ಯೋಜನೆಗೆ ಅನುಮೋದನೆ ನೀಡಿ ಕಳೆದ ರಾಜ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದೆ. ಆದರೆ ರನ್ ವೇ ನಿರ್ಮಾಣ ಒಳಗೊಂಡAತೆ ಇತರೆ ಷರತ್ತು ಪೂರೈಸಲು ಇನ್ನಷ್ಟು ಆರ್ಥಿಕ ನೆರವಿನ ಅವಶ್ಯಕತೆಯಿದೆ. ಈಗಾಗಲೇ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ, ಜಿ¯್ಲÁ ಖನಿಜ ನಿಽ, ಕೆಎಸ್‌ಐಡಿಇಎಲ್‌ನ ಅನುದಾನ ಸೇರಿ ಅನುದಾನ ಹೊಂದಾಣಿಕೆ ಮಾಡಲಾಗಿತ್ತು. ಹೆಚ್ಚುವರಿಯಾಗಿ ಆಗುವ ವೆಚ್ಚಕ್ಕೆ ಸರ್ಕಾರÀ ಪರಿಷ್ಕೃತ ಅನುದಾನ ಬಿಡುಗಡೆ ಮಾಡಬೇಕಾದ ಅವಶ್ಯಕತೆಯಿದೆ. ಇದರ ನಡುವೆಯು ಜಿಲ್ಲಾಡಳಿತ ೨೦೨೬ ರ ಏಪ್ರಿಲï ಅಥವಾ ಮೇ ನಲ್ಲಿ ವಿಮಾನ ನಿಲ್ದಾಣ ಕೆಲಸ ಪೂರ್ಣಗೊಳಿಸುವ ತವಕದಲ್ಲಿರುವುದು ತಿಳಿದುಬಂದಿದೆ.

ವಿಮಾನ ನಿಲ್ದಾಣಕ್ಕೆ ಸೂರು ಕಳೆದುಕೊಳ್ಳುತ್ತಿರುವ ೧೦೮ಕುಟುಂಬಗಳಿಗೆ ಪರಿಹಾರ ಹಾಗೂ ನಿವೇಶನ ನೀಡಿ ಯಾವುದೇ ಸಮಸ್ಯೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು, ಬಾಽತ ಗ್ರಾಮಸ್ಥರೊಂದಿಗೆ ಈಗಾಗಲೇ ವಿಮಾನ ನಿಲ್ದಾಣದಿಂದ ಉಂಟಾಗಬಹುದಾದ ಮಾಲಿನ್ಯ ಕುರಿತು ಚರ್ಚಿಸಿದ್ದು, ಮಾಲಿನ್ಯ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

ನಿತೀಶ್ ಕೆ. ಜಿಲ್ಲಾಽಕಾರಿ ರಾಯಚೂರು

ವಿಮಾನ ನಿಲ್ದಾಣ ನಿರ್ಮಾಣಕ್ಕೆ ಜಿಲ್ಲಾಡಳಿತ ಯರಮರಸ್ ದಂಡ್ ಹಾಗೂ ಏಗನೂರು ಗ್ರಾಮದಲ್ಲಿ ಒಟ್ಟು ೨೨ ಎಕರೆ ಜಮೀನನ್ನು ಭೂ ಸ್ವಾಽÃನ ಮಾಡಿಕೊಂಡಿದ್ದಾರೆ. ಆದರೆ ನಮಗೆ ಪರಿಹಾರ ನೀಡದೆ ಕಾಂಪೌAಡ್ ನಿರ್ಮಾಣ ಮಾಡಿದ್ದು,ಇದರಿಂದ ಏಗನೂರು ಮೂಲಕ ಯರಮರಸ್ ದಂಡ್‌ಗೆ ತೆರಳಲು ಸಮಸ್ಯೆಯಾಗಿರುವುದರಿಂದ ನಾವು ಕಾಂಪೌAಡ್ ಕಾಮಗಾರಿ ನಿಲ್ಲಿಸಿದ್ದೇವೆ.

ಸಂತೋಷ್ ದಿಕ್ಷೀತ್ ಭೂಮಿ ಕಳೆದುಕೊಂಡವರು.