ಜಿಲ್ಲೆ

ತಾಳವಟ್ಟಿ, ಮರಡಿಹಳ್ಳೀಲಿ ಪೂಜೆ

Chitradurga

ಐಮಂಗಲ: ಹೋಬಳಿಯ ತಾಳವಟ್ಟಿ ಗ್ರಾಮದ ತಿಮ್ಮಪ್ಪ ಸ್ವಾಮಿ ಹಾಗೂ ಮರಡಿಹಳ್ಳಿಯ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಪೂಜಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು.

ಗರ್ಭಗುಡಿಯಲ್ಲಿನ ಮೂಲ ವಿಗ್ರಹಗಳಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಪುಷ್ಪಾಲಂಕಾರ ಸೇವೆ ಸಲ್ಲಿಸಿದ ಬಳಿಕ ಸಂಕೀರ್ತನೆ ಹಾಡಲಾಯಿತು.

ಉತ್ಸವ ಮೂರ್ತಿಗಳ ಕೆಳ ಭಾಗದಲ್ಲಿ ವೈಕುಂಠ ದ್ವಾರ ನಿರ್ಮಿಸಿ ಭಕ್ತರಿಗೆ ದೇವರನ್ನು ನೋಡಲು ಅವಕಾಶ ಮಾಡಿಕೊಡಲಾಗಿತ್ತು. ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗ ಮಾಡಲಾಯಿತು. ಉತ್ಸವದ ನಿಮಿತ್ತ ದೇವಸ್ಥಾನವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.