ಹೇರೂರು ಪಿಎಸಿಎಸ್ ವಾರ್ಷಿಕ ಸಭೆಯಲ್ಲಿ ಪ್ರಗತಿಪರ ಕಷಿಕರಾದ ಶ್ರೀಮತಿ ಕಟ್ಟೆಗದ್ದೆ, ಎಂ.ಕೆ.ಕಷ್ಣಪ್ಪ, ಶ್ರೀನಿವಾಸಗೌಡ, ಸದಾಶಿವ ಸುವರ್ಣ, ಉದಯಕುಮಾರ್ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷ ಕೆ.ಎಸ್.ರವೀಂದ್ರ, ನಿರ್ದೇಶಕರಾದ ಕೆ.ಪಿ.ರಂಗಪ್ಪಗೌಡ, ನಟರಾಜ್, ಸಂಜೀವ ಇತರರಿದ್ದರು. 
ಜಿಲ್ಲೆ

ಪಿಎಸಿಎಸ್‌ನಿಂದ ರೈತ ಮಾಹಿತಿ ಕೇಂದ್ರ ಆರಂಭ ಗುರಿ

ಎಸ್.ಎನ್.ರವೀಂದ್ರ

ಜಯಪುರ: ಕೃಷಿ ಜಮೀನಿನ ಮಣ್ಣು ಪರೀಕ್ಷೆ ನಡೆಸಿ ಅದರ ಆಧಾರದಲ್ಲಿ ರಸಗೊಬ್ಬರ ಬಳಕೆ ಮಾಡಲು ರೈತರಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಸಲಹೆ ಕೊಡಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ರೈತ ಮಾಹಿತಿ ಕೇಂದ್ರ ಆರಂಭಿಸಿ ಕಷಿಗೆ ಸಂಬಂಧಿಸಿದ ಪೂರಕ ಕಾರ್ಯಕ್ರಮಗಳನ್ನು ನಡೆಸಲಿದ್ದೇವೆ ಎಂದು ಹೇರೂರು ಪಿಎಸಿಎಸ್ ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ ಹೇಳಿದರು.

ಭಾನುವಾರ ಪಿಎಸಿಎಸ್ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಬೇರೆಡೆಗಳಿಗಿಂತ ಕಡಿಮೆ ಬಡ್ಡಿ ದರದಲ್ಲಿ ಸುಲಭವಾಗಿ ಸಾಲ ನೀಡಲಾಗುತ್ತಿದೆ. ಮಳೆಗಾಲದಲ್ಲಿ ರೈತರಲ್ಲಿ ಗೊಬ್ಬರ ಹಾಕಲು ಹಣ ಇರುವುದಿಲ್ಲ. ಹಣದ ಸಮಸ್ಯೆ ಕಾರಣಕ್ಕೆ ರೈತನ ಆದಾಯ ಕಡಿಮೆ ಆಗಬಾರದು ಎಂದು ಎರಡು ತಿಂಗಳ ಅವಧಿಗೆ ಬಡ್ಡಿ ವಿಧಿಸದೆ ಸಾಲವಾಗಿ ಗೊಬ್ಬರ ನೀಡಲಾಗುತ್ತಿದೆ ಎಂದರು.
2022-23ನೇ ಸಾಲಿನಲ್ಲಿ ವಾರ್ಷಿಕ 95 ಕೋಟಿ ರೂ. ವಹಿವಾಟು ನಡೆಸಿದ್ದು, 24.40 ಲಕ್ಷ ಲಾಭ ಗಳಿಸಿದ್ದೇವೆ. ಒಟ್ಟು ವ್ಯವಹಾರಕ್ಕೆ ಹೋಲಿಕೆ ಮಾಡಿದರೆ ಲಾಭ ಕಡಿಮೆಯಾಗಿದೆ. ಕಡಿಮೆ ಬಡ್ಡಿಯಲ್ಲಿ ಸಾಲ ನೀಡಿರುವುದೂ ಇದಕ್ಕೆ ಕಾರಣ. ಲಾಭ ಕಡಿಮೆಯಾಗಿದ್ದರೂ ರೈತ ಹಾಗೂ ಷೇರುದಾರ ಸದಸ್ಯರ ಸ್ನೇಹಿಯಾಗಿ ಕೆಲಸ ಮಾಡಿರುವ ತಪ್ತಿ ಇದೆ ಎಂದರು.
ಪಿಎಸಿಎಸ್ ಸಿಇಒ ವಿಶ್ವನಾಥ್ ಮಾತನಾಡಿ, 1509 ಷೇರುದಾರರಿರುವ ಸಂಘದಲ್ಲಿ 76.14 ಲಕ್ಷ ರೂ.ಷೇರು ಧನವಿದ್ದು, 12.43 ಕೋಟಿ ಠೇವಣಿ ಸಂಗ್ರಹಿಸಲಾಗಿದೆ. 21.89 ಕೋಟಿ ದುಡಿಯುವ ಬಂಡವಾಳದ ಮೂಲಕ ವ್ಯವಹಾರ ನಡೆಸಿ, 24.40 ಲಕ್ಷ ಲಾಭ ಗಳಿಸಲಾಗಿದೆ. 16.99 ಕೋಟಿ ರೂ. ಸಾಲವನ್ನು ಸ್ವಂತ ಬಂಡವಾಳ ಹಾಗೂ ಡಿಸಿಸಿ ಬ್ಯಾಂಕ್ ನೆರವಿನಿಂದ ನೀಡಲಾಗಿದ್ದು, ಶೇ.90 ಸಾಲ ವಸೂಲಾತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಹೇರೂರು ಪಿಎಸಿಎಸ್ ಮಾಜಿ ಕಾರ್ಯದರ್ಶಿ ವಿಷ್ಣುಮೂರ್ತಿ ಸೇವೆಯೂ ಸಂಸ್ಥೆ ಯಶಸ್ಸಿಗೆ ಕಾರಣವಾಗಿದ್ದು, ಅವರನ್ನು ಗೌರವಿಸಬೇಕು ಎಂದು ಷೇರುದಾರ ಗುರುವಪ್ಪ ಗೌಡ ಅಭಿಪ್ರಾಯಪಟ್ಟರು.
ಸರ್ವ ಸದಸ್ಯರ ಸಭೆಯಲ್ಲಿ ಪ್ರಗತಿಪರ ಕಷಿಕರಾದ ಶ್ರೀಮತಿ ಕಟ್ಟೆಗದ್ದೆ, ಎಂ.ಕೆ.ಕಷ್ಣಪ್ಪ, ಶ್ರೀನಿವಾಸಗೌಡ, ಸದಾಶಿವ ಸುವರ್ಣ, ಉದಯಕುಮಾರ್, ಅಪೂರ್ವ ಸ್ವ ಸಹಾಯ ಸಂಘದ ಪದಾಧಿಕಾರಿಗಳನ್ನು, ನಿವತ್ತ ಲೆಕ್ಕಾಧಿಕಾರಿ ವೆಂಕಟರಮಣ ಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು 12ನೇ ತರಗತಿಯಲ್ಲಿ ಹೆಚ್ಚು ಅಂಕಗಳಿಸಿದ ಷೇರುದಾರ ಸದಸ್ಯರ ಮಕ್ಕಳನ್ನು ಪುರಸ್ಕರಿಸಲಾಯಿತು.
ನಿರ್ದೇಶಕರಾದ ಕೆ.ಪಿ.ರಂಗಪ್ಪ ಗೌಡ, ನಟರಾಜ್, ಚಂದ್ರೇಗೌಡ, ಸಂಜೀವ, ಮಾಜಿ ಅಧ್ಯಕ್ಷ ಡಿ.ಎನ್.ಜಗದೀಶ್, ಷೇರುದಾ ಕೆ.ಆರ್.ಸುಕುಮಾರ್, ನಿರ್ದೇಶಕರು, ಷೇರುದಾರರು ಇತರರಿದ್ದರು.