ಹಗರಿಬೊಮ್ಮನಹಳ್ಳಿ: ಜಿಲ್ಲೆಯಲ್ಲಿ ವೀರಶೈವ ಸಮುದಾಯದ 25 ಸಾವಿರ ಜನರ ನೋಂದಣಿ ಗುರಿ ಹೊಂದಲಾಗಿದೆ ಎಂದು ವೀರಶೈವ ಮಹಾಸಭಾದ ರಾಷ್ಟ್ರೀಯ ಸಮಿತಿ ಸದಸ್ಯ ಕೋರಿ ವಿರೂಪಾಕ್ಷಪ್ಪ ಹೇಳಿದರು.
ಇದನ್ನೂ ಓದಿ: ವೀರಶೈವ ಮಹಾಸಭಾ ತಾಲೂಕು ಘಟಕ ಉಪಾಧ್ಯಕ್ಷರಾಗಿ ಆಯ್ಕೆ
ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವೀರಶೈವ ಲಿಂಗಾಯತ ಮಹಾಸಭಾ ಸದಸ್ಯತ್ವ ಪಡೆದವರಿಗೆ ಗುರುತಿನ ಚೀಟಿ ವಿತರಣೆ ಹಾಗೂ ದೀಪಾವಳಿ ಆಚರಣೆ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಳೆದ ವರ್ಷ ಮಹಾಸಭಾದ ಸಂಘಟನೆ ಇಷ್ಟೊಂದು ಸಕ್ರಿಯವಾಗಿರಲಿಲ್ಲ. ಈ ಬಾರಿ ಬಹುತೇಕ ತಾಲೂಕು ಮಟ್ಟದಿಂದಲೇ ಉತ್ತಮ ಸಂಘಟನೆ ಪ್ರಕ್ರಿಯೆ ಬರುತ್ತಿದೆ. ತಾಲೂಕಿನಲ್ಲಿಯೇ 5 ಸಾವಿರ ನೋಂದಾಣಿಯಾದರೆ, ಜಿಲ್ಲೆಯಲ್ಲಿ ಗುರಿಮೀರಿ ನೋಂದಣಿ ಮಾಡಿಸಬೇಕಾಗುತ್ತದೆ ಎಂದರು.
ರಾಜ್ಯ ಸಮಿತಿ ಉಪಾಧ್ಯಕ್ಷ ಕೆ.ಬಿ.ಶ್ರೀನಿವಾಸ್ ಮಾತನಾಡಿ, ಸಮುದಾಯ ಅಭಿವೃದ್ಧಿ ಹೊಂದಬೇಕಾದರೆ ಸಂಘಟನೆ ಮುಖ್ಯ. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿರುವ ರುದ್ರಭೂಮಿ ಸಮಸ್ಯೆ ಕೈಗೆತ್ತಿಕೊಂಡು ಸೌಲಭ್ಯ ಪಡೆಯುವಲ್ಲಿ ಹೋರಾಟ ಮಾಡೋಣ. ಸಮುದಾಯವನ್ನು ಒಗ್ಗೂಡಿಸಿಕೊಂಡು ಅಭಿವೃದ್ಧಿಯತ್ತ ಮುನ್ನೆಡೆಯೋಣ ಎಂದರು.
ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ, ಹಾಲಸ್ವಾಮಿ ಮಠದ ಹಾಲಸಿದ್ಧೇಶ್ವರ ಸ್ವಾಮೀಜಿ, ಹಿಂದು ಜಾಗೃತಿ ಸಮಿತಿ ರಾಜ್ಯ ಸಮನ್ವಯಕ ಗುರುಪ್ರಸಾದ್ ಗೌಡ, ಸದಸ್ಯರಾದ ಶಂಕರ್ ಅಂಗಡಿ, ಮಹಾಸಭಾ ತಾಲೂಕು ಅಧ್ಯಕ್ಷ ಕೊಟ್ರೇಶ್ ಶೆಟ್ಟರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್,
ಖಜಾಂಚಿ ವೀರಭದ್ರಯ್ಯ, ಸದಸ್ಯರಾದ ಅಕ್ಕಿ ಲಲಿತಾ, ಶಿವರುದ್ರಪ್ಪ, ಟಿ.ಜಿ.ಎಂ.ಕೊಟ್ರೇಶ್, ರಾಜೇಶ್ ಬ್ಯಾಡಿಗಿ, ಬಿ.ದೇವಿಪ್ರಸಾದ್, ಗುರುಬಸವರಾಜ್ ಸೊನ್ನದ್, ಬಿ.ವೀರೇಶ, ಸತೀಶ್ ಪಾಟೀಲ್, ಮಂಗಳಗೌರಿ, ಮಂಜುಳಾ, ಪಟ್ಟೇದ್ ಪ್ರಭಾವತಿ, ಪಿ.ಪಂಕಜಾ, ಸಕ್ರಿಹಳ್ಳಿ ಕೊಟ್ರೇಶ್, ಎಸ್.ವಿಶ್ವನಾಥ ಇತರರಿದ್ದರು.