ಕಲಬುರಗಿ ಜಿಲ್ಲೆಯ ಅನುದಾನಿತ ಪ್ರೌಢಶಾಲೆಯ ಶಿP್ಷÀಕರ ಸಂಘದವರು ವೇತನ ಸಕಾಲಕ್ಕೆ ನೀಡಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು.ಸತೀಶ ಜಾಮಗೊಂಡ, ಲಿಂಗರಾಜ ಅನಸೂರ,ಸೂರ್ಯಕಾಂತ ಪಿ.ಜಿ., ಮಾನಪ್ಪ ನಾಯಕ ಇತರರಿದ್ದರು. 
ಜಿಲ್ಲೆ

ಅನುದಾನಿತ ಶಿಕ್ಷಕರ ವೇತನ ಸಕಾಲಕ್ಕೆ ಕೊಡಿ

ಮನವಿ ಸ್ವೀಕಸಿರಿದ ಅಧಿಕಾರಿಗಳು ತಕ್ಷಣವೇ ಬಿಡುಗಡೆ ಮಾಡಲು ತಾಕೀತು


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಜಿಲ್ಲೆಯ ಅನುದಾನಿತ ಪ್ರೌಢಶಾಲೆಯ ಶಿP್ಷÀಕರ ಹಾಗೂ ಸಿಬ್ಬಂದಿ ವೇತನವನ್ನು ಪ್ರತಿ ತಿಂಗಳು ೫ನೇ ದಿನಾಂಕದAದು ಸಕಾಲಕ್ಕೆ ನೀಡಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಜ್ಯ ಅನುದಾನಿತ ಪ್ರೌಢ ಶಾಲಾ ಶಿಕ್ಷಕ, ಶಿಕ್ಷಕೇತರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಗುರುವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾಧ್ಯಕ್ಷ ಸತೀಶ ಜಾಮಗೊಂಡ, ಗೌರವಾಧ್ಯಕ್ಷ ರಾಜೇಶ ನೀಲಹಳ್ಳಿ,ಪ್ರಧಾನ ಕಾರ್ಯದರ್ಶಿ ಲಿಂಗರಾಜ ಅನಸೂರ, ಕೋಶಾಧ್ಯಕ್ಷ ಸೂರ್ಯಕಾಂತ ಪಿ.ಜಿ., ಉಪಾಧ್ಯಕ್ಷ ಮಾನಪ್ಪ ನಾಯಕ, ಸಹ ಕಾರ್ಯದರ್ಶಿ ರಾಜಕುಮಾರ ಆರ್.ಕೆ. ಭಾಋತ ಸಾಂಗವಿಕರ ಇತರರು ನಗರದಲ್ಲಿರುವ ಶಾಲಾ ಶಿP್ಷÀಣ ಮತ್ತು ಸಾP್ಷÀರತ ಇಲಾಖೆಯ ಉಪನಿರ್ದೇಶಕರಿಗೆ ಭೇಟಿಯಾಗಿ ಮನವಿ ಸಲ್ಲಿಸಿ ಒತ್ತಾಯಿಸಿದರು.
ಅನುದಾನಿತ ಪ್ರೌಢಶಾಲೆಯ ಶಿP್ಷÀಕರ ವೇತನ ನೀಡಲು ಸರ್ಕಾರ ಬಜೆಟï ಬಿಡುಗಡೆ ಮಾಡಿದ್ದು, ಅದನ್ನು ಬೇಗನೆ ಜಿಪಂ ಕಾರ್ಯಾಲಯದಿಂದ ಪಡೆದುಕೊಂಡು ವಿಂಗಡಿಸಿ ನಗರ ಮತ್ತು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿರುವ ಅನುದಾನಿತ ಶಾಲಾ ಶಿP್ಷÀಕರ ವೇತನ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಿಯಮಿತವಾಗಿ ಸಂಬಳ ಆಗದೆ ಇರುವುದರಿಂದ ಕುಟುಂಬ ನಿರ್ವಹಣೆ ತೊಂದರೆಯಾಗುತ್ತಿದೆ, ಸರ್ಕಾರ ಹಣ ನೀಡಿದರೂ ವಿಳಂಬ ಮಾಡುವುದು ಸಲ್ಲದು ಎಂದು ಮನವಿಯಲ್ಲಿ ಕೋರಲಾಗಿದೆ. ಮನವಿ ಸ್ವೀಕರಿಸಿದ ಅಧಿಕಾರಿಗಳು ತಕ್ಷಣವೇ ಸಂಬAಧಿಸಿದವರನ್ನು ಕರೆಯಿಸಿ ಕೂಡಲೇ ವೇತನ ಬಿಡುಗಡೆ ಮಾಡಲು ತಾಕೀತು ಮಾಡಿದರು. ಶಿಕ್ಷಣಾಧಿಕಾರಿಗಳು ಸ್ಪಂಧಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.