ತರೀಕೆರೆಯಲ್ಲಿ ಏಡ್ಸ್ ಜನಜಾಗೃತಿ ಜಾಥಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ. ಬಿ.ಜಿ.ಚಂದ್ರಶೇಖರ್ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು. ಟಿ.ದಾದಾಪೀರ್, ಪ್ರಶಾಂತ್, ಚೇತನ್ ಇತರರಿದ್ದರು. 
ಜಿಲ್ಲೆ

ಏಡ್ಸ್ ತಡೆಗೆ ಜನಜಾಗೃತಿ

ಎಸ್.ಎನ್.ರವೀಂದ್ರ

ತರೀಕೆರೆ: ಪಟ್ಟಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿಯಿಂದ ಮಂಗಳವಾರ ಏಡ್ಸ್ ಜನಜಾಗೃತಿ ಜಾಥಾ ಏರ್ಪಡಿಸಲಾಗಿತ್ತು.

ಏಡ್ಸ್‌ನಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ನರಗುಂದ ಜೈಕಿಸಾನ್ ಯುವ ಮಂಡಲ ಕೊಟ್ಟೂರದ ಜಾನಪದ ಕಲಾ ತಂಡದ ಸದಸ್ಯರು ಜನ ಸಾಮಾನ್ಯರಲ್ಲಿ ಅರಿವು ಮೂಡಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಬಿ.ಜಿ.ಚಂದ್ರಶೇಖರ್ ಮಾತನಾಡಿ, ಅಜ್ಜಂಪುರ ಹಾಗೂ ತರೀಕೆರೆಯಲ್ಲಿ ಸಾರ್ವಜನಿಕರು ಹೆಚ್ಚು ಸೇರುವ ಸ್ಥಳಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜನ ಏಡ್ಸ್ ಬಗ್ಗೆ ಜಾಗೃತರಾಗಿ ಲೈಂಗಿಕ ಸುರಕ್ಷತಾ ಕ್ರಮಗಳ ಮೂಲಕ ರೋಗ ತಡೆಗಟ್ಟಬೇಕು ಎಂದರು. ಪುರಸಭೆ ಸದಸ್ಯ ಟಿ.ದಾದಾಪೀರ್ ಮಾತನಾಡಿ, ಮಾರಕ ರೋಗ ತಡೆಗಟ್ಟಲು ಜನ ಸರ್ಕಾರದ ಸೂಚನೆ ಚಾಚೂ ತಪ್ಪದೆ ಪಾಲಿಸಬೇಕು ಎಂದು ಹೇಳಿದರು. ಆರೋಗ್ಯ ನಿರೀಕ್ಷಕ ಪ್ರಶಾಂತ್, ಐಸಿಡಿಸಿ ಸಮಾಲೋಚಕ ಚೇತನ್, ಸಾಮಾಜಿಕ ಕಾರ್ಯಕರ್ತ ಮಧುಸೂದನ್ ಇತರರಿದ್ದರು.