ಚನ್ನರಾಯಪಟ್ಟಣ : ವಿವಿಧ ರೀತಿಯ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಹಲವು ಇಲಾಖೆ, ಸಮುದಾಯಗಳು ಕೈಜೋಡಿಸಿದಾಗ ಮಾತ್ರ ಶೀಘ್ರ ಇತ್ಯರ್ಥ ಕಾಣಲು ಸಾಧ್ಯವೆಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ ಬಿ.ಸಿ.ದೀಪು ಹೇಳಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಸಾರ್ವಜನಿಕ ಆಸ್ಪತ್ರೆ ವತ್ತು ಲಯನ್ಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಂಗವಿಕಲರ ದಿನಾಚರಣೆ ಹಾಗೂ ಏಡ್ಸ್ ದಿನ ಉದ್ಘಾಟಿಸಿ ಮಾತನಾಡಿದರು.
ಎಐವಿ ಸೋಂಕಿತರೂ ಸಮಾಜದಲ್ಲಿ ಬದುಕುವ ಹಕ್ಕು ಪಡೆದಿದ್ದಾರೆ. ತಪ್ಪು ಮಾಡದ ಅನೇಕರು ಸೋಂಕಿಗೆ ಬಲಿಯಾಗಿದ್ದಾರೆ. ಅವರಿಗೆ ಗೌರವ ಕೊಡುವುದು ನಮ್ಮಲ್ಲರ ಕರ್ತವ್ಯ ಎಂದರು.
ಕೇವಲ ಒಂದು ವರ್ಗದಿಂದ ಪರಿಹಾರ ಬಯಸುವುದರಿಂದ ಖಚಿತ ಗುರಿ ತಲುಪಲು ಅಸಾಧ್ಯ. ಎಲ್ಲ ವರ್ಗದವರೂ ಜಾಗೃತಿ ಮೂಡಿಸಿಕೊಂಡಾಗ ಸಮಸ್ಯೆಗಳ ನಿವಾರಣೆ ಸಾಧ್ಯ ಎಂದರು.
ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಮಹೇಶ್ ಮಾತನಾಡಿದರು. ಜಿಲ್ಲೆಯಲ್ಲಿನ ಐಸಿಟಿಸಿ, ಎಆರ್‌ಟಿ ಕೇಂದ್ರಗಳಲ್ಲಿಯೇ ಉತ್ತಮ ಕಾರ್ಯನಿರ್ವಹಣೆ ಮಾಡುತ್ತಿರುವ ತಾಲೂಕು ಕೇಂದ್ರದ ಸಿಬ್ಬಂದಿ ಕೆಂಚೇಗೌಡ, ವೀಣಾ, ಫಾತಿಮಾ ಅವರನ್ನು ಅಭಿನಂದಿಸಲಾಯಿತ್ತು.
ವಕೀಲರ ಸಂಘದ ಕಾರ್ಯದರ್ಶಿ, ಸಿ.ಎನ್. ರಾಘವೇಂದ್ರ, ತಾ.ಪಂ.ಎಂಆರ್‌ಡ ಡಬ್ಲ್ಯೂ ಸುಬ್ರಹ್ಮಣ್ಯ, ಲಯನ್ಸ್ ಕ್ಲಬ್ ಅಧ್ಯಕ್ಷ ನಾಗರಾಜ್, ಎಆರ್‌ಟಿ ಕೇಂದ್ರದ ಕೆಂಚೇಗೌಡ ಇದ್ದರು.