ಜಿಲ್ಲೆ

ಅಹಿಂದ ಪ್ರಾಧಿಕಾರ ರಚನೆ ಮಾಡಿ,  ಪ್ರಚಾರ ಸಮಿತಿ ಅಧ್ಯಕ್ಷ ದೊಡ್ಡವಾಡ ಆಗ್ರಹ

Dharwada - Basavaraj Idli

ಹುಬ್ಬಳ್ಳಿ: ಭಾರತದ ಸಂವಿಧಾನದ ಅಡಿಯಲ್ಲಿ ನ್ಯಾಯಯುತವಾಗಿ ಚುನಾವಣೆ ನಡೆದು ಅಧಿಕಾರ ಗದ್ದುಗೆ ಪ್ರಾಪ್ತವಾಗಬೇಕಾದರೆ ಕೇಂದ್ರ, ರಾಜ್ಯ, ಜಿಲ್ಲೆ, ತಾಲೂಕಿನಲ್ಲಾಗಲಿ ಅಹಿಂದ ಶಕ್ತಿಯ ಬೆಂಬಲ ಬೇಕೇ ಬೇಕು. ಅಹಿಂದ ಶಕ್ತಿಯನ್ನು ಹೊರಗಿಟ್ಟು ಅಧಿಕಾರ ನಡೆಸಲು ಸಾಧ್ಯವಿಲ್ಲ. ಈ ದಿಸೆಯಲ್ಲಿ ಎಲ್ಲ ವರ್ಗ ಸಮುದಾಯಗಳನ್ನು ಆರ್ಥಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕವಾಗಿ ಬಲಪಡಿಸಲು ಅಹಿಂದ ಪ್ರಾಧಿಕಾರ ರಚನೆಯ ಅವಶ್ಯಕತೆ ಇದೆ ಎಂದು ರಾಷ್ಟ್ರೀಯ ಅಹಿಂದ ಪ್ರಚಾರ ಸಮಿತಿ ಅಧ್ಯಕ್ಷ ಗಂಗಾಧರ ದೊಡ್ಡವಾಡ ಹೇಳಿದ್ದಾರೆ.

ಸ್ವಾತಂತ್ರ್ಯ ಬಂದು 79 ವರ್ಷಗಳಾದರೂ ಅಹಿಂದ ವರ್ಗಕ್ಕೆ ಸಿಗಬೇಕಾದ ನ್ಯಾಯ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲಿ ಮತ್ತು ಕೇಂದ್ರ ಮಟ್ಟದಲ್ಲಿ ಅಹಿಂದ ಪ್ರಾಧಿಕಾರದ ರಚನೆ ಅವಶ್ಯಕತೆ ಇದೆ. ಇಲ್ಲಿಯವರೆಗಿನ ಸರ್ಕಾರಗಳು ಅಹಿಂದ ಶಕ್ತಿಯನ್ನು ಸಂದರ್ಭಕ್ಕನುಗುಣವಾಗಿ ಉಪಯೋಗಿಸುತ್ತ ಬಂದಿದ್ದು ಸೂಕ್ತ ಬೆಲೆ ಅಹಿಂದ ವರ್ಗಕ್ಕೆ ಸಿಕ್ಕಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.