ಮೂಲ್ಕಿ: ಮೂಲ್ಕಿ ವಿಜಯಾ ಕಾಲೇಜಿನಲ್ಲಿ ಅಹಿಲ್ಯಾಬಾಯಿ ಹೋಳ್ಕರ್ ಅವರ ಜನ್ಮ ಶತಾಬ್ದಿ ದಿನ ಆಚರಿಸಲಾಯಿತು.
ಮೂಲ್ಕಿ ಮಹಿಳಾ ಸಾಮಾನ್ಯ ಸಮಿತಿ ಅಧ್ಯಕ್ಷೆ ಕಲ್ಪನಾ ಭಟ್ ಕಾರ್ಯಕ್ರಮ ಉದ್ಘಾಟಿಸಿ, ಅಹಿಲ್ಯಾಬಾಯಿ ಜೀವನದ ಯಶೋಗಾಥೆಯನ್ನು ಸವಿವರವಾಗಿ ಮಕ್ಕಳಿಗೆ ತಿಳಿಸಿದರು.
ಕಾಲೇಜು ಪ್ರಾಂಶುಪಾಲ ಪ್ರೊ.ವೆಂಕಟೇಶ್ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೂಲ್ಕಿ ಮಹಿಳಾ ಸಾಮಾನ್ಯ ಸಮಿತಿ ಕಾರ್ಯದರ್ಶಿ, ಮುಖ್ಯಸ್ಥೆ ಶರ್ಮಿಳಾ ರಾಜೇಶ್ ಉಪಸ್ಥಿತರಿದ್ದರು. ಸ್ವಾತಿ ಸ್ವಾಗತಿಸಿದರು. ರಕ್ಷಾ ನಿರೂಪಿಸಿದರು. ಅಮೃತಾ ವಂದಿಸಿದರು.