ಮಿಸಸ್ ಕಲಾತರಂಗ-2025 ಪ್ರಶಸ್ತಿಗೆ ಭಾಜನರಾದ ಅಹನಾಅದ್ವೈತ್ ಹಾಗೂ ಆಕರ್ಷಕ ಕಣ್ಣುಗಳ ಸ್ಪರ್ಧೆಯಲ್ಲಿ ಸುಂದರ ನಯನ ಪ್ರಶಸ್ತಿಗೆ ಭಾಜನರಾದ ಚೈತ್ರಾ ದಿವಾಕರ್ 
ಜಿಲ್ಲೆ

ಅಹನಾ ಅದ್ವೈತ್‌ಗೆ ಮಿಸಸ್ ಕಲಾ ತರಂಗ ಪ್ರಶಸ್ತಿ

ಕೊಳ್ಳೇಗಾಲ: ಚಾಮರಾಜನಗರ ಜಿಲ್ಲೆಯ ಪ್ರತಿಷ್ಟಿತ ಚಿನ್ನದ ಮಳಿಗೆ ವೇಣುಗೋಲ್ಡ್ ಪ್ಯಾಲೇಸ್ ಮಾಲೀಕ ಓ.ವಿ.ದಿವಾಕರ್ ಅವರ ಸೊಸೆ ಅಹನಾ ಅದ್ವೈತ್ ಅವರು ಮಿಸಸ್ ಕಲಾ ತರಂಗ-2025 ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದ ಸಭಾಂಗಣದಲ್ಲಿ ಕರ್ನಾಟಕ ಆರ್ಯವೈಶ್ಯ ಮಹಿಳಾ ಮಹಾಸಭಾ ಸೋಮವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಕಲಾತರಂಗ ಕಾರ್ಯಕ್ರಮ ಅಂಗವಾಗಿ ಏರ್ಪಡಿಸಿದ್ದ 18ರಿಂದ 30ನೇ ವರ್ಷದ ವಯೋಮಿತಿಯೊಳಗಿನ ಮಹಿಳೆಯರ ಮಿಸಸ್ ಕಲಾತರಂಗ ಸ್ಪರ್ಧೆಯಲ್ಲಿ ಅಹನಾ ಅದ್ವೈತ್ ಅವರು ಪ್ರಥಮ ಸ್ಥಾನ ಪಡೆದು ಮಿಸಸ್ ಕಲಾ ತರಂಗ ಪ್ರಶಸ್ತಿ ಪಡೆದರು.

ಅಂತೆಯೇ 30ರಿಂದ 50 ವರ್ಷದ ವಯೋಮಿತಿಯ ಮಹಿಳೆಯರ ಸ್ಪರ್ಧೆಯಲ್ಲಿ ಓ.ವಿ.ದಿವಾಕರ್ ಅವರ ಪತ್ನಿ ಚೈತ್ರಾ ದಿವಾಕರ್ ಅವರು 6ನೇ ಸ್ಥಾನ ಪಡೆದರು ಹಾಗೂ ಆಕರ್ಷಕ ಕಣ್ಣುಗಳ ಸ್ಪರ್ಧೆಯಲ್ಲಿ ಸುಂದರ ನಯನ ಪ್ರಶಸ್ತಿ ಪಡೆದಿದ್ದಾರೆ.

ವಿಜೇತರಿಗೆ ಕರ್ನಾಟಕ ಆರ್ಯವೈಶ್ಯ ಮಹಿಳಾ ಮಹಾ ಸಭಾ ರಾಜ್ಯಾಧ್ಯಕ್ಷೆ ಉಮಾ ಸಾಯಿರಾಮ್ ಪ್ರಶಸ್ತಿ ನೀಡಿ ಅಭಿನಂದಿಸಿದರು. ಈ ವೇಳೆ ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ರವಿಶಂಕರ್, ಬೆಂಗಳೂರಿನ ಸನ್‌ರೈನ್ ಜ್ಯೂಯಲರ್ಸ್ ಮಾಲೀಕ ನಾಗರಾಜು, ವಂಡರ್ ಡೈಮಂಡ್ ಮಾಲೀಕರು ಇದ್ದರು.