ಜಿಲ್ಲೆ

ಆಗುಂಬೆ ನಾಲ್ಕನೇ ತಿರುವಿನಲ್ಲಿ ರಸ್ತೆ ಕುಸಿತ ಸಂಚಾರ ಸ್ಥಗಿತ

reportermng

ಮಂಗಳೂರು: ಆಗುಂಬೆಯ ನಾಲ್ಕನೇ ಸುತ್ತಿನಲ್ಲಿ ಗುಡ್ಡ ಕುಸಿದ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ಸದ್ಯಕ್ಕೆ ಶಿವಮೊಗ್ಗ ಹಾಗೂ ಹೆಬ್ರಿ ಸಂಪರ್ಕಿಸುವ ರಸ್ತೆಯು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು ಬದಲಿ ಮಾರ್ಗವಾಗಿ ಹುಲಿಕಲ್ ಘಾಟ್ ನಲ್ಲಿ ಸಂಚರಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.

ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿತಗೊಂಡ ಕಾರಣ ಮಣ್ಣು ತೆರವುಗೊಳಿಸಿ ಸಾಗಿಸುವುದೇ ಸಾಹಸವಾಗಿದೆ. ಸ್ಥಳೀಯರ ಅಭಿಪ್ರಾಯದಂತೆ ಇದೇ ರೀತಿಯಲ್ಲಿ ಮಳೆಯಾದರೆ ಇನ್ನು ಕುಸಿತ ಕಾಣುವ ಸಂಭವವಿದೆ ಎನ್ನುತ್ತಾರೆ.