ರಾಯಚೂರು ತಾಲೂಕಿನ ಕೆರೆಬುದೂರು ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಗುರುವಾರ ಸಂಚಾರ ತಡೆ ನಡೆಸಿ ತಹಸೀಲ್ದಾರ್ ಡಾ.ಹಂಪಣ್ಣಗೆ ಮನವಿ ಸಲ್ಲಿಸಿತು. 
ಜಿಲ್ಲೆ

ರೈತ ವಿರೋಧಿ ನೀತಿಯನ್ನು ಕೈಬಿಡಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ರಸ್ತೆ ಸಂಚಾರ ತಡೆ

ರಾಯಚೂರು: ರೈತ ವಿರೋಧಿ ನೀತಿಯನ್ನು ಕೇಂದ್ರ ಸರ್ಕಾರ ಕೈಬಿಡುವಂತೆ ಒತ್ತಾಯಿಸಿ ತಾಲೂಕಿನ ಕೆರೆಬುದೂರು ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಗುರುವಾರ ರಸ್ತೆ ಸಂಚಾರ ತಡೆ ನಡೆಸಿ, ತಹಸೀಲ್ದಾರ್ ಡಾ.ಹಂಪಣ್ಣಗೆ ಮನವಿ ಸಲ್ಲಿಸಿತು.

ಕಾಯ್ದೆ ತಿದ್ದುಪಡಿ ಮೂಲಕ ಕೃಷಿ ಜಮೀನು ಮತ್ತು ಕೃಷಿ ಮಾರುಕಟ್ಟೆಗಳನ್ನು ಕಾರ್ಪೋರೇಟ್ ಕಂಪನಿಗಳ ಕೈಗೊಪ್ಪಿಸಲು ಹುನ್ನಾರ ನಡೆದಿದೆ. ಹತ್ತಿ, ಭತ್ತ, ಸಜ್ಜೆ ದರ ಕುಸಿದಿದಿದೆ. ಆದ್ದರಿಂದ ಕೂಡಲೇ ಖರೀದಿ ಕೇಂದ್ರಗಳನ್ನು ಆರಂಭಿಸಿ ಬೆಂಬಲ ಬೆಲೆಯಲ್ಲಿ ಬೆಳೆ ಖರೀದಿಸಬೇಕು. ಪ್ರಧಾನಮಂತ್ರಿ ಫಸಲ್‌ಬಿಮಾ ಯೋಜನೆಯಡಿ ಹಣ ಭರಿಸಿದ ಎಲ್ಲ ರೈತರಿಗೆ ಪರಿಹಾರ ನೀಡಬೇಕು. ಜಿಲ್ಲೆಯಲ್ಲಿ ಸಿಸಿಐ ಕಚೇರಿ ಆರಂಭಿಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಜಿಲ್ಲಾ ಅಧ್ಯಕ್ಷ ಸೂಗೂರಯ್ಯಸ್ವಾಮಿ, ಪದಾಧಿಕಾರಿಗಳಾದ ದೊಡ್ಡಬಸನಗೌಡ ಬಲ್ಲಟಗಿ, ಯಂಕಪ್ಪ ಕಾರಬಾರಿ, ಮಲ್ಲಣ್ಣ ದಿನ್ನಿ, ಬಸವರಾಜ, ಲಿಂಗಾರೆಡ್ಡಿ ಪಾಟೀಲ್, ಬೂದೆಯ್ಯಸ್ವಾಮಿ, ಪ್ರಭಾಕರ ಪಾಟೀಲ್, ಭೀಮೇಶ್ವರ ರಾವ್ ಇತರರು ಇದ್ದರು.