ಜಿಲ್ಲೆ

ಕಾಡಾನೆ ಹಿಂಡು ದಾಳಿ, ಕೃಷಿ ನಾಶ

Dakshina Kannada

ಸುಳ್ಯ: ಹಲವು ದಿನಗಳಿಂದ ನಾಪತ್ತೆಯಾಗಿದ್ದ ಕಾಡಾನೆ ಹಿಂಡು ಮತ್ತೆ ಕಾಣಿಸಿಕೊಂಡಿದ್ದು, ಸೋಮವಾರ ಮಂಡೆಕೋಲು ಗ್ರಾಮದ ಚಾಕೋಟೆ ಎಂಬಲ್ಲಿ ರೈತರ ತೋಟಕ್ಕೆ ನುಗ್ಗಿ ಕೃಷಿ ಹಾನಿಮಾಡಿವೆ.

ಚಾಕೋಟೆ ನಿವಾಸಿ ಜಗದೀಶ್ ನಾಯಕ್ ಎಂಬುವರ ತೋಟಕ್ಕೆ ಸೋಮವಾರ ತಡರಾತ್ರಿ ಆನೆಗಳ ಹಿಂಡು ನುಗ್ಗಿವೆ. ಹಿಂಡಿನಲ್ಲಿ ಒಟ್ಟು ಏಳು ಆನೆಗಳು ಇದ್ದು ಬಾಳೆ ಹಾಗೂ ಅಡಕೆ ಮರಗಳನ್ನು ಹಾಳುಮಾಡಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.