ಕಡಬ: ವನ್ಯಜೀವಿಗಳಾದ ಹಂದಿ, ಮಂಗ, ನವಿಲು ಸಹಿತ ಇತರೆ ವನ್ಯಜೀವಿಗಳು ಕೃಷಿ ತೋಟಕ್ಕೆ ಲಗ್ಗೆ ಇಟ್ಟು ಅಪಾರ ಪ್ರವಾಣದ ಬೆಳೆ ನಾಶ ವಾಡಿವೆ. ಕಡಬ ತಾಲೂಕಿನ ಪುಣ್ಚಪ್ಪಾಡಿ ಗ್ರಾಮದ ನೂಜಾಜೆ ಎಂಬಲ್ಲಿ ಪ್ರಮೋದ್ ಕುವಾರ್ ರೈ ಅವರ ತೋಟಕ್ಕೆ ಕಾಡು ಹಂದಿಗಳು ದಾಳಿ ವಾಡಿ ಅಡಿಕೆ ಗಿಡಗಳನ್ನು ಜಗಿದು ನಾಶವಾಡಿವೆ. ಇದರಿಂದ ಅಪಾರ ನಷ್ಟ ಉಂಟಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.