*ವಿಜಯವಾಣಿ ನೇಗಿಲಯೋಗಿಯಲ್ಲಿ ಗುರುತಿಸಿದ್ದ ಮೂವರು ರೈತರು
*ಇಲಾಖಾಧಿಕಾರಿಗಳ ಕಾರ್ಯದಿಂದ ಸಾಧಕರಿಗೆ ಸ್ಫೂರ್ತಿ
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಕಠಿಣ ಪರಿಶ್ರಮ ಇದ್ದರೆ ಯಾವುದೇ ಕ್ಷೇತ್ರ ಸಾಧಕನಿಗೆ ಕೈ ಹಿಡಿಯುತ್ತದೆ ಎಂಬುದಕ್ಕೆ ಕೃಷಿ ಕ್ಷೇತ್ರವೇ ಸಾಕ್ಷಿಯಾಗಿದೆ. ಅಂತಹ ಕ್ಷೇತ್ರದಲ್ಲಿ ಯಶಸ್ಸಿನ ಮೆಟ್ಟಿಲೇರಿರುವ ಸಾಧಕ ರೈತರನ್ನು ಕೃಷಿ ಇಲಾಖೆ ಗುರುತಿಸಿ, ಸ್ಫೂರ್ತಿ ತುಂಬುವ ಕೆಲಸ ಮಾಡಲು ಮುಂದಾಗಿದೆ.
ಹೌದು, ರಾಮನಗರ ತಾಲೂಕಿನ ಕಗ್ಗಲಹಳ್ಳಿ ಶಾಂತಮ್ಮ ಅವರಿಗೆ ರಾಜ್ಯಮಟ್ಟದ ಕ್ಯಾನ್ ಬ್ಯಾಂಕ್ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ, ತಾಲೂಕಿನ ಲಕ್ಷ್ಮೀಪುರ ಎಲ್.ವಿ.ಶಿವರಾಜು ಅವರಿಗೆ ಜಿಲ್ಲಾಮಟ್ಟದ ಪ್ರಗತಿಪರ ರೈತ ಪ್ರಶಸ್ತಿ, ಕೈಲಾಂಚ ಹೋಬಳಿಯ ನೆಲಮಲೆ ಗ್ರಾಮದ ಕೆ.ನವೀನ್ ಅವರಿಗೆ ತಾಲೂಕುಮಟ್ಟದ ಯುವ ರೈತ ಪ್ರಶಸ್ತಿ ನೀಡಿದೆ.
ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಕೃಷಿ ಮೇಳದಲ್ಲಿ ಪ್ರಶಸ್ತಿ ಪ್ರದಾನ ಮಾಡಿರುವುದು ರೈತ ವಲಯಕ್ಕೆ ಉತ್ತೇಜನ ಸಿಕ್ಕಂತಾಗಿದೆ. ಫಸಲಿಗೆ ತಕ್ಕಂತೆ ದರವಿಲ್ಲ, ಮಾರುಕಟ್ಟೆಯಲ್ಲಿ ಬೆಲೆ ಏರಿಳಿತ, ವ್ಯವಸಾಯ ಕಷ್ಟ, ನೀರಿನ ಬವಣೆ, ವನ್ಯಪ್ರಾಣಿ ಉಪಟಳ, ವಾತಾವರಣದಲ್ಲಿನ ಬದಲಾವಣೆ ಹೀಗೆ ಅನೇಕ ಸಮಸ್ಯೆಯಲ್ಲಿ ರೈತ ಕೃಷಿ ಕಾಯಕ ನಡೆೆಸುತ್ತಾ ಜೀವನದ ಹಾದಿ ಸವೆಸುತ್ತಾ ತನಗೆ, ತನ್ನ ಕುಟುಂಬಕ್ಕೆ, ನಾಡಿಗೆ, ದೇಶಕ್ಕೆ ಅನ್ನ ನೀಡುತ್ತಿದ್ದಾನೆ. ಇಂತಹ ಸನ್ನಿವೇಶದಲ್ಲೂ ಕೃಷಿಯಿಂದ ಹಿಮ್ಮುಖವಾಗದೆ ಕೃಷಿಯನ್ನೇ ನಂಬಿ, ಅದರಲ್ಲೇ ಸಾಧನೆ ಮಾಡಲು ಹೊರಟಿರುವ ನೂರಾರು ರೈತರಿಗೆ ಈ ಪುರಸ್ಕಾರಗಳು ಕೃಷಿಯತ್ತ ಸೆಳೆಯಲು ಅವಶ್ಯವಾಗಿವೆ.
ವಿಜಯವಾಣಿಯ "ನೇಗಿಲಯೋಗಿ' ಅಂಕಣದ ಮೂಲಕ ಶಾಂತಮ್ಮ, ಎಲ್.ವಿ.ಶಿವರಾಜು, ಕೆ.ನವೀನ್ ಅವರ ಸಾಧನೆ ಗುರುತಿಸಿ, ಅವರ ಕೃಷಿ ಕೈಂಕರ್ಯದ ಬಗ್ಗೆ ವಿಶೇಷ ವರದಿಗಳನ್ನು ಪ್ರಕಟಿಸಿತ್ತು. ಅಂತೆಯೇ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ರೈತರಲ್ಲಿ ಸಂತಸ ಉಂಟು ಮಾಡಿದೆ.
ಕಗ್ಗಲಹಳ್ಳಿಯ ಶಾಂತಮ್ಮ ಅವರನ್ನು ಮೊಟ್ಟಮೊದಲ ಬಾರಿಗೆ ಗುರುತಿಸಿದ್ದು ವಿಜಯವಾಣಿ. ಅವರ ಸಾಧನೆಯ ವರದಿ ಪ್ರಕಟವಾದ ಬಳಿಕ ಎರಡು ವರ್ಷಗಳ ಹಿಂದೆ ತಾಲೂಕುಮಟ್ಟ, ನಂತರ ಬಾಗಲಕೋಟೆಯಲ್ಲಿ ತೋಟಗಾರಿಕೆ ಇಲಾಖೆಯಿಂದ ತೋಟಗಾರಿಕಾ ರೈತ ಮಹಿಳೆ ಪ್ರಶಸ್ತಿ, ಕಳೆದ ವರ್ಷ ಜಿಲ್ಲಾಮಟ್ಟದ ರೈತ ಮಹಿಳೆ ಪ್ರಶಸ್ತಿ ಸಂದಿತ್ತು. ಈ ವರ್ಷ ರಾಜ್ಯಮಟ್ಟದ ಪ್ರಶಸ್ತಿ ಸಂದಿದೆ.
ಕಗ್ಗಲಹಳ್ಳಿಯ ಶಾಂತಮ್ಮ, ಅನಾರೋಗ್ಯದಿಂದ ಕೃಷಿ ನಿರ್ವಹಣೆ ಪತಿಗೆ ಕಷ್ಟವಾದಾಗ ಇವರೇ ಸ್ವತ@ ಕೃಷಿ ಕಾರ್ಯಕ್ಕಿಳಿದು ಜೇನು, ಹೂವು, ತೋಟಗಾರಿಕೆ, ರೇಷ್ಮೆ ಬೆಳೆದು ಮಾರುಕಟ್ಟೆಯಲ್ಲಿ ಇವರೇ ವ್ಯಾಪಾರ ನಡೆಸುತ್ತಿದ್ದಾರೆ. ಕೃಷಿ ಕಾರ್ಯದಲ್ಲಿ ಟ್ರ್ಯಾಕ್ಟರ್ ಚಾಲನೆ, ಯಂತ್ರೋಪಕರಣಗಳ ಬಳಕೆ, ರೇಷ್ಮೆ ಬೆಳೆ ಬೆಳೆದು ಉತ್ತಮ ರೈತ ಸಾಧಕಿಯಾಗಿ ಗುರುತಿಸಿಕೊಂಡಿದ್ದಾರೆ.
ಲ್ಮಪುರದ ಎಲ್.ವಿ.ಶಿವರಾಜು ಹಲವು ವಿಶೇಷ ಬೆಳೆ ಬೆಳೆಯುವ ಮೂಲಕ ಸ್ವತ@ ಮಾವಿನ ಸಸಿಗಳಿಗೆ ಕಸಿ ಮಾಡಿ, ಸಮಗ್ರ ಕೃಷಿ ಮೂಲಕ ಗಮನ ಸೆಳೆದು ಮಾದರಿ ರೈತರಾಗಿ ಗುರುತಿಸಿಕೊಂಡಿದ್ದಾರೆ. ನೆಲಮಲೆ ಕೆ.ನವೀನ್ ಯುವ ರೈತರಾಗಿದ್ದು, ಕೃಷಿಯಲ್ಲಿ ವಿಶೇಷ ಆಶಕ್ತಿ ವಹಿಸಿ, ತೋಟದ ಬೆಳೆ, ಹೂವು ಬೆಳೆಯಲ್ಲಿ ಉತ್ತಮ ಕೃಷಿ ನಡೆಸುತ್ತಿದ್ದು, ಅವರಿಗೆ ಯುವ ರೈತ ಪ್ರಶಸ್ತಿ ಲಭಿಸಿದೆ.
ಲಕ್ಷ್ಮೀಪುರ
ಪ್ರಶಸ್ತಿ ಪುರಸತರು
ಕೃಷಿ ವಿವಿಯ ಕಾರ್ಯಕ್ರಮದಲ್ಲಿ ಮಾಗಡಿ ತಾಲೂಕಿನ ಮಲ್ಲಿಗುಂಟೆಯ ಕೆ.ಎನ್.ಸೌಭಾಗ್ಯಾ ಅವರಿಗೆ ಜಿಲ್ಲಾಮಟ್ಟದ ಪ್ರಗತಿಪರ ರೈತ ಮಹಿಳೆ ಪ್ರಶಸ್ತಿ, ರಾಮನಗರ ತಾಲೂಕು ಕವಣಾಪುರ ಹೇಮಾವತಿ, ಚನ್ನಪಟ್ಟಣ ತಾಲೂಕು ನಿಡಗೋಡಿ ಎನ್.ಸಿ.ಕೆಂಪರಾಜು, ವಿಠಲೇನಹಳ್ಳಿ ಸಿ.ಶೋಭಾ, ಮಾಗಡಿ ತಾಲೂಕು ಜೆ.ಪ್ರಸನ್ನ ಹುಚ್ಚಹನುಮೇಗೌಡನಪಾಳ್ಯ, ನಾರಾಯಣಪುರ ಇ.ನಂದಿನಿ, ಕನಕಪುರ ತಾಲೂಕು ಹೊಳೆಬೀದಿ ಎಸ್.ರು, ಹೊಸಹಳ್ಳಿಯ ಬಿ.ಕೆ.ಪದ್ಮಾ ಅವರಿಗೆ ಯುವ ರೈತ ಪ್ರಶಸ್ತಿ ಪ್ರದಾನ ಮಾಡಲಾಗಿದೆ.