ಗುಂಡ್ಲುಪೇಟೆ : ಕೃಷಿ ಇಲಾಖೆಯು ಕೃಷಿ ಭಾಗ್ಯ ಯೋಜನೆ ಫಲಾನುಭವಿಗಳನ್ನು ಕೇಂದ್ರೀಕರಿಸಿ ಕರ್ನಾಟಕ ರೈತ ಸಮೃದ್ಧಿ ಯೋಜನೆ ಜಾರಿಗೊಳಿಸಿದೆ. ಸಮಗ್ರ ಕೃಷಿ ಪದ್ಧತಿ ಆಡಿ ರೈತರನ್ನು ಮುಖ್ಯ ಬೆಳೆಯೊಂದಿಗೆ. ತರಕಾರಿ, ಪಶು ಸಂಗೋಪನಾ ಘಟಕ, ಜೇನು, ಎರೆಹುಳ ಗೊಬ್ಬರ ಘಟಕ, ಸಾವಯವ ಗೊಟ್ಟನ ತಯಾರಿಕಾ ಘಟಕ ಮೀನುಗಾರಿಕೆ, ಕೃಷಿ ಅರಣ್ಯ, ರೇಷ್ಮೆ ಹುಳ ಸಾಕಣೆಗೆ ಪ್ರೇರೇಪಿಸುವುದು ಯೋಜನೆ ಉದ್ದೇಶವಾಗಿದೆ. ಕೃಷಿ ಭಾಗ್ಯ ಯೋಜನೆಯಡಿ ಕೃಷಿಹೊಂಡ ನಿರ್ಮಿಸಿಕೊಂಡು ಪಾಲಿಥಿನ್ ಹೊದಿಕೆ ಆಳವಡಿಸಿಕೊಂಡಿರುವ ಫಲಾನುಭವಿ ರೈತರು ಮಾತ್ರ ಈ ಯೋಜನೆಯ ಸಮಗ್ರ ಕೃಷಿ ಪದ್ಧತಿ ಅಡಿ ಅರ್ಜಿ ಸಲ್ಲಿಸಲು ಅರ್ಹರು. ವಿವಿಧ ಸಮಗ್ರ ಕೃಷಿ ಘಟಕಗಳ ಅನುಷ್ಠಾನಕ್ಕೆ ಸಾಮಾನ್ಯ ರೈತರಿಗೆ ಶೇ.50, ಪ. ವರ್ಗದ ರೈತರಿಗೆ ಶೇ. 90 ಸಹಾಯಧನ ನೀಡ ಲಾಗುವುದು. ಆಸಕ್ತರು ಜ. 27ರ ಒಳಗೆ ಅರ್ಜಿ ಸಲ್ಲಿಸಬಹುದು. ವಿವರಗಳಿಗೆ ಸಮೀಪದ ಕೃಷಿ ಇಲಾಖೆ
ಸಂಪರ್ಕಿಸುವಂತೆ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.