ವಿಜಯನಗರ ಜಿಲ್ಲೆಯ ನಾಗೇನಹಳ್ಳಿ ಎಲ್‌ಎಲ್ ಕಾಲುವೆಯ 9ನೇ ಕಿ.ಮೀ.ಬಳಿ ನಡೆಯುತ್ತಿರುವ ಸೇತುವೆ ಕಾಮಗಾರಿಯನ್ನು ರೈತ ಸಂಘದ ಪದಾಧಿಕಾರಿಗಳು ವೀಕ್ಷಿಸಿದರು. ತಾಲೂಕು ಕಾರ್ಯಾಧ್ಯಕ್ಷ ಕೊಟ್ಟೂರು ರಮೇಶ, ನಗರ ಅಧ್ಯಕ್ಷ ತಿಮ್ಮಪ್ಪ ನಾಯಕ ಪದಾಧಿಕಾರಿಗಳಾದ ಗೋವಿಂದಪ್ಪ, ವಿರೂಪಣ್ಣ, ಡಿ.ಮುರಾರಿ, ಬಿ.ವಿ.ಗೌಡ, ಕೊಟ್ಟೂರು ರಮೇಶ, ತಿಮ್ಮಪ್ಪನಾಯಕ ಇತರರಿದ್ದರು. 
ಜಿಲ್ಲೆ

ಕೃಷಿ ಚಟುವಟಿಕೆ ಕೈಗೊಳ್ಳಲು ನೀರು ಹರಿಸಲಿ

ರುದ್ರಪ್ಪ ವಾಲಿ

ಕಂಪ್ಲಿ: ರೈತರ ಅನುಕೂಲಕ್ಕಾಗಿ ಕೂಡಲೇ ಎಲ್‌ಎಲ್ ಮತ್ತು ಎಚ್‌ಎಲ್ ಕಾಲುವೆಗಳಿಗೆ ನೀರು ಹರಿಸುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಒತ್ತಾಯಿಸಿದರು.

ವಿಜಯನಗರ ಜಿಲ್ಲೆಯ ನಾಗೇನಹಳ್ಳಿ ಎಲ್‌ಎಲ್ ಕಾಲುವೆಯ 9ನೇ ಕಿ.ಮೀ.ಬಳಿ ನಡೆಯುತ್ತಿರುವ ಸೇತುವೆ ಕಾಮಗಾರಿ ವೀಕ್ಷಿಸಿ ಭಾನುವಾರ ಮಾತನಾಡಿದರು.

ಜಲಾಶಯದಿಂದ ತುಂಗಭದ್ರಾ ನದಿಗೆ ಕಳೆದ ಮೂರು ದಿನಗಳಿಂದ 80ಸಾವಿರ ಕ್ಯೂಸೆಕ್ ನೀರು ವೃಥಾ ಹರಿಯುತ್ತಿದೆ. ಇದೇ ನೀರನ್ನು ಎಲ್‌ಎಲ್ ಮತ್ತು ಎಚ್‌ಎಲ್ ಕಾಲುವೆ ಮೂಲಕ ಹರಿಸಿದಲ್ಲಿ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ. ಎಲ್‌ಎಲ್ ಕಾಲುವೆಯ 70ಕಿ.ಮೀ.ನಂತರ ಕಾಮಗಾರಿ ಸದ್ಯ ನಡೆಯುತ್ತಿದೆ.

ಇದರ ಹಿಂದೆ 9ನೇ ಕಿ.ಮೀ ಮತ್ತು 15ನೇ ಕಿ.ಮೀ ಬಳಿ ಸೇತುವೆ ಕಾಮಗಾರಿ ಮುಗಿದಿದ್ದು ಸೇತುವೆಗೆ ಅಳವಡಿಸಿದ ಸೆಂಟ್ರಿಂಗ್ ತೆರವುಗೊಳಿಸಿ ನೀರು ಹರಿಸಬೇಕಿದೆ. ಕಾಲುವೆ ಕಾಮಗಾರಿಗಳನ್ನು ನೀರು ಬಿಡುವ ಸಮಯಕ್ಕೆ ಮುನ್ನ ಮುಕ್ತಾಯಗೊಳಿಸಬೇಕು ಎಂದು ತುಂಗಭದ್ರಾ ಜಲಾಶಯದ ಅಧಿಕಾರಿಗಳನ್ನು ಒತ್ತಾಯಿಸಿದರು.