ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಮತ್ತು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಒಗ್ಗೂಡಿಸುವಿಕೆಯಡಿ ಕೃಷಿ ಇಲಾಖೆ ಹಾಗೂ ತಾಪಂ ವತಿಯಿಂದ ಕೃಷಿ ಕವಚ ಕಾರ್ಯಾಗಾರ ಮದ್ದೂರು ತಾಲೂಕು ಪಂಚಾಯಿತಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಾ, ರಾಮಲಿಂಗಯ್ಯ, ಎನ್.ರೂಪಶ್ರೀ, ಕೆ.ಎನ್.ಕರ್ಣ, ಎನ್.ವಿ.ಕೃಷ್ಣೇಗೌಡ, ಅಪ್ಪಾಜಿಗೌಡ ಇದ್ದರು. 
ಜಿಲ್ಲೆ

ಕೃಷಿ ಕವಚ ಕಾರ್ಯಾಗಾರ

ಲೋಕೇಶ್ ಮನು. ಡಿ

ಮದ್ದೂರು: ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ 2025-26ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಮತ್ತು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿ ಇಲಾಖೆ ಹಾಗೂ ತಾಪಂ ವತಿಯಿಂದ ಸೋಮವಾರ ಕೃಷಿ ಕವಚ ಕಾರ್ಯಾಗಾರ ಆಯೋಜಿಸಲಾಗಿತ್ತು.

ತಾಲೂಕು ಕೃಷಿ ಸಹಾಯಕ ನಿರ್ದೇಶಕಿ ಪ್ರತಿಭಾ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಹೊಲದಲ್ಲಿ ಬದು ನಿರ್ಮಾಣದಿಂದ ಹೆಚ್ಚು ಇಳುವರಿ ಪಡೆದುಕೊಳ್ಳಬಹುದು. ಇದರಿಂದ ಮಳೆ ನೀರನ್ನು ತಡೆಹಿಡಿದು, ನೀರನ್ನು ಶೇಖರಣೆ ಮಾಡಿಕೊಂಡರೆ ಭೂಮಿಯ ಫಲವತ್ತತೆ ಹೆಚ್ಚಾಗಿ ಇಳುವರಿ ಕೂಡ ಹೆಚ್ಚಾಗುತ್ತದೆ. ಜತೆಗೆ ನೀರಿನ ಅಭಾವ ಕೂಡ ತಡೆಹಿಡಿಯಬಹುದು ಎಂದರು.

ತಾಪಂ ಇಒ ರಾಮಲಿಂಗಯ್ಯ, ಕಂದಕ ,ಬದು ನಿರ್ಮಾಣದಿಂದ ರೈತರಿಗೆ ಆಗುವ ಅನುಕೂಲಗಳ ಬಗ್ಗೆ ತಿಳಿಸಿದರು.

ನಂತರ 2025-26ನೇ ಸಾಲಿನ ಕ್ರಿಯಾಯೋಜನೆಯಲ್ಲಿ ಕಂದಕ, ಬದು ನಿರ್ಮಾಣ ಕಾಮಗಾರಿಗೆ ಅನುಮೋದನೆ ಪಡೆದುಕೊಂಡಿರುವ ಫಲಾನುಭವಿಗಳಿಗೆ ಕಾಮಗಾರಿಯ ಆದೇಶ ಪತ್ರ ವಿತರಣೆ ಮಾಡಲಾಯಿತು.

ಕೃಷಿ ಅಧಿಕಾರಿಗಳಾದ ಎನ್.ರೂಪಶ್ರೀ, ಕೆ.ಎನ್.ಕರ್ಣ, ಎನ್.ವಿ.ಕೃಷ್ಣೇಗೌಡ, ಮುಖಂಡ ಅಪ್ಪಾಜಿಗೌಡ ಹಾಗೂ ಆತ್ಮ ಸಿಬ್ಬಂದಿ ಇದ್ದರು.