ಕೃಷಿ ಪ್ರಾಯೋಗಿಕ ಮಾಹಿತಿ ಕಾರ್ಯಾಗಾರವನ್ನು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಹನಮ ರೆಡ್ಡಿ ಇಬ್ರಾಹಿಂಪುರ ಉದ್ಘಾಟಿಸಿದರು. 
ಜಿಲ್ಲೆ

ಕೃಷಿ ಪ್ರಾಯೋಗಿಕ ಮಾಹಿತಿ ಕಾರ್ಯಾಗಾರ

ಇಂದಿರಾ ಎನ್ ಕೆ

ಕೋಟ: ಜಲಾನಯನ ಅಭಿವೃದ್ಧಿ ಇಲಾಖೆ, ಜಿಪಂ-ಉಡುಪಿ, ಕೃಷಿ ಇಲಾಖೆ, ಮೀನುಗಾರಿಕೆ ಇಲಾಖೆ, ಭಾ.ಕೃ.ಅ.ಪ. ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ಸ್ಕೋಡ್‌ವೆಸ್ ಸಂಸ್ಥೆ, ಆಯುಷ್ಮಾನ್ ಭವ ಸಂಸ್ಥೆ, ಉಡುಪಿ ಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿಯಮಿತ ಮತ್ತು ಅಮೃತೇಶ್ವರಿ ರೈತ ಉತ್ಪಾದಕ ಕಂಪನಿ ನಿಯಮಿತ ಹಮ್ಮಿಕೊಂಡ ಕೃಷಿ ಪ್ರಾಯೋಗಿಕ ಮಾಹಿತಿ ಕಾರ್ಯಾಗಾರ ಕೋಡಿ ಹೊಸಬೆಂಗ್ರೆಯಲ್ಲಿ ನಡೆಯಿತು.

ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಹನಮ ರೆಡ್ಡಿ ಇಬ್ರಾಹಿಂಪುರ ಕಾರ್ಯಕ್ರಮ ಉದ್ಘಾಟಿಸಿದರು. ಮೀನುಗಾರಿಕೆ ಮಹಾವಿದ್ಯಾಲಯ ಮಂಗಳೂರು ಪ್ರಾಧ್ಯಾಪಕ ಡಾ.ಶಿವಕುಮಾರ ಮಗದ ಅವರು ಮುತ್ತು ಕೃಷಿಯಿಂದ ಉದ್ಯಮಶೀಲತೆ ಮತ್ತು ಆರ್ಥಿಕ ಪ್ರಗತಿ ಬಗ್ಗೆ ವಿವರಿಸಿದರು.

ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಧನಂಜಯ್ ಬಿ., ಮೀನುಗಾರಿಕೆ ಮಹಾವಿದ್ಯಾಲಯ ಮಂಗಳೂರು ಪ್ರಾಧ್ಯಾಪಕ ಡಾ.ಮಂಜುಲೇಶ್, ಕೋಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ಉದ್ಯಮಿ ಶಂಕರ್ ಕುಂದರ್, ಸಂಪನ್ಮೂಲ ವ್ಯಕ್ತಿಗಳಾಗಿ ಆಯುಷ್ಮಾನ್ ಸಂಸ್ಥೆ ನಿರ್ದೇಶಕರಾದ ಪ್ರಜ್ವಲ್, ಸಿದ್ದು ಪೂಜಾರಿ, ಎಫ್.ಪಿ.ಒ ಉಡುಪಿಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿಯಮಿತ ಅಧ್ಯಕ್ಷ ಲೋಹಿತ್ ಖಾರ್ವಿ, ಅಮೃತೇಶ್ವರಿ ರೈತ ಉತ್ಪಾದಕ ಕಂಪನಿ ನಿಯಮಿತ ಅಧ್ಯಕ್ಷೆ ಬೇಬಿ ಮೆಂಡನ್, ಸಂಸ್ಥೆ ನಿರ್ದೇಶಕರಾದ ಸುದಿನ, ಪುಷ್ಪಾ ಶೆಟ್ಟಿ, ಕಾರ್ತಿಕ್, ರಾಹುಲ್, ಸಿಬ್ಬಂದಿ ಭೂಮಿಕಾ ಶೆಟ್ಟಿ, ಸುಶ್ಮಿತಾ ಮೆಂಡನ್ ಮತ್ತು ಅಕ್ಷತಾ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಸಂಯೋಜಕ ಗಂಗಾಧರ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.