oplus_0 
ಜಿಲ್ಲೆ

ನಿಗದಿತ ಬೆಲೆಯಲ್ಲೇ ಕೃಷಿ ಸಾಮಗ್ರಿ ಮಾರಬೇಕು

ಎಂ.ಎಸ್​.ಹಿರೇಮಠ ಬೆಳಗಾವಿ

ಯರಗಟ್ಟಿ: ಸರ್ಕಾರ ನಿಗದಿಪಡಿಸಿದ ಬೆಲೆ ಹಾಗೂ ಪರವಾನಗಿವುಳ್ಳ ಕೃಷಿ ಪರಿಕರಗಳನ್ನು ಮಾತ್ರ ಮಾರಾಟಗಾರರು ಮಾರಾಟ

ಮಾಡಬೇಕು ಎಂದು ಕೃಷಿ ಇಲಾಖೆ ಜಿಲ್ಲಾ ಉಪನಿರ್ದೇಶಕ ಸಲೀಂ ಸಂಗತ್ರಾಸ ಹೇಳಿದರು.

ಪಟ್ಟಣದ ಎಪಿಎಂಸಿ ಸಭಾ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಲೂಕಿನ ಕೃಷಿ ಪರಿಕರಗಳ ಮಾರಾಟಗಾರರ ಸಭೆಯಲ್ಲಿ ಮಾತನಾಡಿ, ಹಂಗಾಮು ಪೂರ್ವದಲ್ಲಿ ಗುಣಮಟ್ಟದ ಕೃಷಿ ಪರಿಕರ ಸಂಗ್ರಹಿಸಿ ರೈತರಿಗೆ ಸಕಾಲಕ್ಕೆ ವಿತರಿಸಬೇಕು. ಕಲಬೆರಕೆ ಮತ್ತು ಅವಧಿ ಮೀರಿದ ರಸಗೊಬ್ಬರ, ಕೀಟನಾಶಕ ಸೇರಿ ಇತರ ಕೃಷಿ ಪರಿಕರಗಳ ಮಾರಾಟ ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ರೈತರಿಗೆ ಕಡ್ಡಾಯವಾಗಿ ಖರೀದಿ ರಸೀದಿ ನೀಡಬೇಕು ಎಂದರು.

ಬೆಳಗಾವಿ ಜಿಲ್ಲಾ ಕಷಿ ಇಲಾಖೆಯ ಜಾಗತ ಕೋಶದ ಅಧಿಕಾರಿ ಆರ್​.ಬಿ. ಪಾಟೀಲ ಮಾತನಾಡಿ, ಕೃಷಿ ಪರಿಕರಗಳನ್ನು ನಿಗದಿಪಡಿಸಿದಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಕಾನೂನು ಕ್ರಮ ಕೆಕೊಂಡು ಪರವಾನಗಿ ರದ್ದುಪಡಿಸಲಾಗುವುದು.

ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ ಮಾತನಾಡಿ, ಸಸ್ಯಗಳ ಬೆಳವಣಿಗೆಗೆ ಮತ್ತು ಅಭಿವದ್ಧಿಗೆ ಇಂಗಾಲ, ಜಲಜನಕ ಮತ್ತು ಆಮ್ಲಜನಕ ಸ್ವಾಭಾವಿಕವಾಗಿ ದೊರೆಯುತ್ತದೆ. ಸಾರಜನಕ, ರಂಜಕ, ಪೊಟ್ಯಾಶ್​, ಕ್ಯಾಲ್ಸಿಯಂ, ಮ್ಯಾಗ್ನಿಷಿಯಂ, ಗಂಧಕ, ಕಬ್ಬಿಣ, ಜಿಂಕ್​ ಇತ್ಯಾದಿ ಪೋಷಕಾಂಶಗಳು ಸರಿಯಾಗಿ ನೀಡದಿದ್ದರೆ ಇಳುವರಿ ಕುಂಠಿತವಾಗುತ್ತದೆ. ಉತ್ತಮ ಇಳುವರಿ ಪಡೆಯಲು ಹಾಗೂ ಮಣ್ಣಿನ ಲವತ್ತತೆ ಕಾಪಾಡಲು ಸರಿಯಾದ ರಸಗೊಬ್ಬರಗಳ ಬಳಕೆ ಮಾಡಬೇಕು ಎಂದು ತಿಳಿಸಿದರು.

ತಹಸೀಲ್ದಾರ್​ ಎಂ.ವಿ. ಗುಂಡಪ್ಪಗೋಳ, ಕೃಷಿ ಅಧಿಕಾರಿ ಎಸ್​.ಎಲ್​. ದೇಸಾಯಿ, ಎಂ.ಜಿ. ಕಳಸಪ್ಪನವರ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಉಮೇಶ ಯರಗಟ್ಟಿ, ಶ್ರವಣ ಶಿವಪೂಜಿ, ರೆತ ಮುಖಂಡರಾದ ಶಿವಾನಂದ ಕರಿಗೋಣ್ಣವರ, ಸೋಮು ರೆನಾಪೂರ, ರಂಗಪ್ಪ ಗಂಗರಡ್ಡಿ, ಯಕ್ಕೇರೆಪ್ಪ ಮಾಳಗಿ, ಚಿದಂಬರ ಕಟ್ಟಿಮನಿ ಹಾಗೂ ತಾಲೂಕಿನ ಕಷಿ ಪರಿಕರಗಳ ಮಾರಾಟಗಾರರು ಹಾಗೂ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.