ಇರುವಕ್ಕಿಯ ಕೃಷಿ ಮತ್ತು ತೋಟಗಾರಿಕಾ ವಿವಿಯಲ್ಲಿ ಹಮ್ಮಿಕೊಂಡಿದ್ದ ಇಂಡಸ್ಟ್ರಿ- ಅಕಾಡೆಮಿಯಾ ಕಾನ್‌ಕ್ಲೇವ್ ಕಾರ್ಯಕ್ರಮವನ್ನು ಕುಲಪತಿ ಡಾ. ಆರ್.ಸಿ.ಜಗದೀಶ್ ಉದ್ಘಾಟಿಸಿದರು. ಡಾ. ಆನಂದ ಗುಡಿಹಾಳ್, ಕೆ.ಎಂ.ರಮೇಶ, ಡಾ.ಎಂ.ಶಿವಮೂರ್ತಿ ಇತರರಿದ್ದರು.  
ಜಿಲ್ಲೆ

ವಿದ್ಯಾರ್ಥಿಗಳಿಗೆ ಕೃಷಿ ಕೈಗಾರಿಕೆ ತರಬೇತಿ ಅವಶ್ಯ

Shivamogga - Desk - Megha MS

ಆನಂದಪುರ: ಕೃಷಿ ವಿವಿಯಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳನ್ನು ಈವರೆಗೂ ಆಡಳಿತ ಮತ್ತು ರೈತ ಸೇವೆಗೆ ಸಿದ್ಧಗೊಳಿಸಲಾಗುತ್ತಿತ್ತು. ಇನ್ನುಮುಂದೆ ಕೃಷಿ ಕೈಗಾರಿಕೆ ಮುನ್ನಡೆಸಲು ಸಿದ್ಧಗೊಳಿಸಬೇಕು ಎಂದು ಇರುವಕ್ಕಿಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್ ತಿಳಿಸಿದರು.

ಇರುವಕ್ಕಿಯ ಕೃಷಿ ವಿವಿ ಆವರಣದಲ್ಲಿ ಆಯೋಜಿಸಿದ್ದ ಇಂಡಸ್ಟ್ರಿ ಅಕಾಡೆಮಿಯಾ ಕಾನ್‌ಕ್ಲೇವ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಸ್ಯಗಳಿಗೆ ಅಗತ್ಯ ಪೋಷಕಾಂಶ, ಕೃಷಿ ಉಪಕರಣ, ಕೀಟನಾಶಕ, ಬೆಳೆ ಸಂಸ್ಕರಣೆ ಯಂತ್ರ ತಯಾರಿಕೆ ಕುರಿತು ಇಂಡಸ್ಟ್ರೀ ಮಾಲೀಕರು ಮತ್ತು ಇಂಜನಿಯರ್ ಜತೆ ಒಡಂಬಡಿಕೆ ಮಾಡಿಕೊಂಡು ವಿದ್ಯಾರ್ಥಿಗಳು ಸಂಪರ್ಕ ಹೊಂದಬೇಕು. ನಿರಂತರ ಅಧ್ಯಯನ ಮತ್ತು ಹೊಸ ಆವಿಷ್ಕಾರಗಳಿಗೆ ಸಿದ್ಧಗೊಳ್ಳುವಂತೆ ಮಾಡಲು ಇಂತಹ ಸಮ್ಮೇಳನ ಅಗತ್ಯವಿದೆ ಎಂದರು.
ವಿವಿ ಆಡಳಿತ ಮಂಡಳಿ ಸದಸ್ಯ ಡಾ. ಪಿ.ಕೆ.ಬಸವರಾಜ್ ಮಾತನಾಡಿ, ಕೈಗಾರಿಕಾ ಸಂಸ್ಥೆ ಸಹಯೋಗದಲ್ಲಿ ಮಣ್ಣು ಪರೀಕ್ಷೆಯ ಆ್ಯಪ್ ಮಾಡಲಾಗಿದೆ. ಇಂತಹ ಇನ್ನಷ್ಟು ಅವಕಾಶಗಳು ಸೃಷ್ಟಿಸಬೇಕು ಎಂದು ತಿಳಿಸಿದರು.
ಸೀಡ್ಸ್ ಉದ್ಯಮಿ ಡಾ. ಬಿ.ಕೆ.ಕುಮಾರಸ್ವಾಮಿ ಮಾತನಾಡಿ, ಕೈಗಾರಿಕೆ ಆಧರಿತಾ ಅನುಭವ, ಕಲಿಕೆ ಕೋರ್ಸ್ ಆರಂಭಿಸಲು ಸಲಹೆ ನೀಡಿದರು. ವಿವಿ ಕುಲಸಚಿವ ಡಾ. ಕೆ.ಸಿ.ಶಶಿಧರ ಮಾತನಾಡಿ, ದೇಶದ ಕೃಷಿ ಶಿಕ್ಷಣದಲ್ಲಿಯೇ ಪ್ರಥಮ ಬಾರಿಗೆ ವಿವಿಯಲ್ಲಿ ಐಒಟಿ ಸ್ಮಾರ್ಟ್ ಕಲಿಕೆ ಕುರಿತು ಕಲಿಕಾನುಭವ ಕೋರ್ಸ್ ಆರಂಭಿಸಲಾಗಿದೆ. ಇದು ನಮ್ಮ ದೇಶದಲ್ಲಿನ ವಿವಿಗಳಿಗೆ ಮಾದರಿ ಎಂದರು.
ಕೀಟನಾಶಕ ರಾಸಾಯನಿಕ ತಜ್ಞ ಡಾ. ಆನಂದ ಗುಡಿಹಾಳ್, ಉದ್ಯಮಿ ಕೆ.ಎಂ.ರಮೇಶ, ಪ್ರಾಧ್ಯಾಪಕ ಡಾ. ಎಂ.ಶಿವಮೂರ್ತಿ ಇತರರಿದ್ದರು.
ರಾಷ್ಟ್ರಮಟ್ಟದಲ್ಲಿ ಕೈಗಾರಿಕೋದ್ಯಮ ಹಾಗೂ ವಿದ್ಯಾ ಸಂಸ್ಥೆಗಳ ಸಂಪರ್ಕ ಕೊಂಡಿ ಬಲಪಡಿಸುವುದು ಹೇಗೆ? ವಿಷಯ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಾದ ಭಾರತಿ(ಬಿಹಾರ), ಪಿ.ಕುಮುದಾ (ಕರ್ನಾಟಕ), ರವೀಂದ್ರ ಗೋದ್ರಾ (ಗುಜರಾತ್) ವಿದ್ಯಾರ್ಥಿ ವಿಭಾಗದಲ್ಲಿ ಬಹುಮಾನ ಗಳಿಸಿದರು. ಡಾ. ಅನಿಲ್ ಕುಮಾರ್ (ಕರ್ನಾಟಕ), ಡಾ. ವಿಜಯಕುಮಾರ್ (ಕೇರಳ), ತೀರ್ಥರ್ಥ ಚಟ್ಟೋಪಾಧ್ಯಾಯ(ಬಿಹಾರ) ವೃತ್ತಿಪರ ವಿಭಾಗದಲ್ಲಿ ಬಹುಮಾನ ಪಡೆದರು.